Bengaluru 28°C
Ad

ಮಳೆಗೆ ವಾಹನಗಳು ಓಡಾಡುವ ನಡು ರಸ್ತೆಯಲ್ಲೇ ದೈತ್ಯ ಮೊಸಳೆ ಪ್ರತ್ಯಕ್ಷ

ನಾಡು ಕಟ್ಟಲು ಕಾಡನ್ನು ನಾಶ ಮಾಡುತ್ತಿರುವ ಹಿನ್ನಲೆ ದಿನಕ್ಕೊಂದು ಕಾಡು ಪ್ರಾಣಿ ನಾಡಿನಲ್ಲಿ ಪ್ರತ್ಯಕ್ಷವಾಗುತ್ತಿವೆ.

ಮುಂಬಯಿ : ನಾಡು ಕಟ್ಟಲು ಕಾಡನ್ನು ನಾಶ ಮಾಡುತ್ತಿರುವ ಹಿನ್ನಲೆ ದಿನಕ್ಕೊಂದು ಕಾಡು ಪ್ರಾಣಿ ನಾಡಿನಲ್ಲಿ ಪ್ರತ್ಯಕ್ಷವಾಗುತ್ತಿವೆ. ಇದೀಗ ಮಳೆಗೆ ದೈತ್ಯ ಮೊಸಳೆಯೊಂದು ನಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಘಟನೆ ಮಹಾರಾಷ್ಟ್ರದ ರತ್ನಗಿರಿಯ ಚಿಪ್ಲೂನ್‌ನಲ್ಲಿರುವ ಮುಖ್ಯ ರಸ್ತೆಯಲ್ಲಿ ಕಂಡುಬಂದಿದೆ.

Ad
300x250 2

ಕೆಲ ದಿನಗಳಿಂದ ಈ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು ಇಲ್ಲಿರುವ ಶಿವನದಿಯಿಂದ ಮೊಸಳೆ ರಸ್ತೆಗೆ ಬಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ವಾಸ್ತವವಾಗಿ ಇಲ್ಲಿನ ಶಿವನದಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೊಸಳೆಗಳು ವಾಸಿಸುತ್ತವೆ ಎನ್ನಲಾಗಿದೆ.

ರಸ್ತೆಯಲ್ಲಿ ಮೊಸಳೆ ಪ್ರತ್ಯಕ್ಷವಾದ ಸುದ್ದಿ ಹರಡುತ್ತಿದ್ದಂತೆ ಇಲ್ಲಿನ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ, ಆದರೆ ಇಲ್ಲಿನ ನಿವಾಸಿಗಳು ಹೇಳುವಂತೆ ಮೊಸಳೆಗಳು ಕಾಣಸಿಗುವುದು ಇದು ಮೊದಲಲ್ಲ ಮಳೆಗಾಲ ಬಂದರೆ ಸಾಕು ನದಿಯಲ್ಲಿ ನೀರಿನ ಮಟ್ಟ ಹೆಚ್ಚಿದ ಕೂಡಲೇ ನದಿಯಿಂದ ಮೊಸಳೆಗಳು ರಸ್ತೆಗೆ ಬರುತ್ತವೆ ಹಾಗೆಯೆ ಈ ಬಾರಿಯೂ ಬಂದಿದೆ ಎಂದು ಹೇಳಿದ್ದಾರೆ.

Ad
Ad
Nk Channel Final 21 09 2023
Ad