ಒಪ್ಪೋ ಕಂಪನಿಯ ರೆನೋ ಸರಣಿ ಸ್ಮಾರ್ಟ್ಫೋನ್ಗಳಿಗೆ ಸದ್ಯ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಆದೆರ ಇಒಪ್ಪೋ ರೆನೋ ಅಡಿಯಲ್ಲಿ ಇದೀಗ ಹೊಸ ಸ್ಮಾರ್ಟ್ಫೋನ್ ಬಿಡುಗಡೆ ಮಾಡಲು ಸಜ್ಜಾಗಿದೆ. ಇದೇ ನವೆಂಬರ್ 23 ರಂದು ಮಾರುಕಟ್ಟೆಗೆ ಒಪ್ಪೋ ರೆನೋ 11 ಬರಲಿದೆ. ಈ ಬಗ್ಗೆ ಕಂಪನಿ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ಈ ಫೋನ್ಗಳು “SLR-ಮಟ್ಟದ ಫೋಟೋವನ್ನು” ಸೆರೆಹಿಡಿಯುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಒಪ್ಪೋ ರೆನೋ 11 ಸರಣಿ ಅಡಿಯಲ್ಲಿ ಒಟ್ಟು ಎರಡು ಸ್ಮಾರ್ಟ್ಫೋನ್ ಇದೆ. ಒಪ್ಪೋ ರೆನೋ 11 ಮತ್ತು ಒಪ್ಪೋ ರೆನೋ 11 ಪ್ರೊ ಆಗಿದೆ. ಈ ಎರಡೂ ಫೋನ್ಗಳು ನವೆಂಬರ್ 23 ರಂದು ಮಧ್ಯಾಹ್ನ ಬಿಡುಗಡೆಯಾಗಲಿದೆ.
ಒಪ್ಪೋ ರೆನೋ 11 ಸರಣಿ 4 ಬಣ್ಣಗಳಲ್ಲಿ ಬರುವ ಸಾಧ್ಯತೆ ಇದೆ. ಇದು ಫ್ಲೋರೈಟ್ ಬ್ಲೂ, ಮೂನ್ಸ್ಟೋನ್ ವೈಟ್, ವೈಡೂರ್ಯ ಮತ್ತು ಅಬ್ಸಿಡಿಯನ್ ಕಪ್ಪು ಬಣ್ಣಗಳಿಂದ ಕೂಡಿದೆ. 11 ಪ್ರೊ ಇದರಲ್ಲಿ ಹಿಂಬದಿಯ ಕ್ಯಾಮೆರಾಗಳು 50MP Sony LYT-700 ಪ್ರಾಥಮಿಕ ಸಂವೇದಕ, 8MP ಅಲ್ಟ್ರಾವೈಡ್ ಸ್ನ್ಯಾಪರ್ ಮತ್ತು 2x ಜೂಮ್ ಲೆನ್ಸ್ನೊಂದಿಗೆ 32MP IMX709 ಟೆಲಿಫೋಟೋ ಸಂವೇದಕವನ್ನು ಒಳಗೊಂಡಿರುತ್ತದೆ. ರೆನೋ 11 ಕೂಡ ಇದೇ ಸಂವೇದಕಗಳನ್ನು ಹೊಂದಿದೆ ಎಂಬ ವದಂತಿಗಳಿವೆ. ಆದರೆ ಪ್ರಾಥಮಿಕ ಕ್ಯಾಮೆರಾ ಸೋನಿ LYT-600 ಸಂವೇದಕವಾಗಿರಬಹುದು.
ಒಪ್ಪೋ ರೆನೋ 11 67W ಚಾರ್ಜಿಂಗ್ ವೇಗದೊಂದಿಗೆ 4,800mAh ಬ್ಯಾಟರಿಯನ್ನು ಹೊಂದಿದೆ. ಒಪ್ಪೋ ರೆನೋ ಪ್ರೊ 80W ಚಾರ್ಜಿಂಗ್ ಸಾಮರ್ಥ್ಯದೊಂದಿಗೆ 4,700mAh ಬ್ಯಾಟರಿಯನ್ನು ಹೊಂದಿದೆ.