News Karnataka Kannada
Saturday, May 11 2024
ತಂತ್ರಜ್ಞಾನ

ಕೈಗೆಟಕುವ ದರದಲ್ಲಿ ಒನ್​ಪ್ಲಸ್ ಟ್ಯಾಬ್ಲೆಟ್‌

Dffhgdfdv
Photo Credit : News Kannada

ಮಾರುಕಟ್ಟೆಗೆ ಜನಪ್ರಿಯ ಕಂಪೆನಿಯಾಗಿರುವ ಒನ್​ಪ್ಲಸ್​ ಕಂಪನಿಯು ಇದೀಗ ಟ್ಯಾಬ್ಲೆಟ್‌ ವಿಭಾಗದಲ್ಲಿ ಬಿಡುಗಡೆ ಮಾಡಿದೆ. ಈ ಟ್ಯಾಬ್​ನ ವಿನ್ಯಾಸದ​ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸೋರಿಕೆಯಾಗಿದ್ದು, ಫೀಚರ್ಸ್​ಗಳ ಮಾಹಿತಿಯು ಸಹ ಹೊರಬಿದ್ದಿದೆ. ಇದೀಗ ಒನ್​ಪ್ಲಸ್​ ಕೈಗೆಟಕುವ ಬೆಲೆಗೆ ಗುಣಮಟ್ಟದ ಆಗಿದೆ.

ದೊಡ್ಡ ಪರದೆ, ದೀರ್ಘಬಾಳಿಕೆಯ ಬ್ಯಾಟರಿ ಮತ್ತು ಬೆಲೆಗೆ ತಕ್ಕುದಾದ ಕಾರ್ಯಸಾಮರ್ಥ್ಯದಿಂದ ಇದು ಹಿಡಿಸುತ್ತದೆ. ಒನ್‌ಪ್ಲಸ್‌ ಪ್ಯಾಡ್‌ ರೀತಿಯಲ್ಲಿಯೇ ಇದು ಸಹ ವಿನ್ಯಾಸದಲ್ಲಿ ತೆಳುವಾಗಿದೆ. ಹಗುರಾಗಿ ಇರುವುದರಿಂದ ಹೆಚ್ಚು ಹೊತ್ತು ಕೈಯಲ್ಲಿ ಇಟ್ಟುಕೊಳ್ಳಬಹುದು. ಯುಎಸ್‌ಬಿ ಟೈಪ್‌–ಸಿ ಚಾರ್ಜಿಂಗ್‌ ವ್ಯವಸ್ಥೆ ಇದ್ದು, ಎಲ್‌ಟಿಇ ಆವೃತ್ತಿಯು ಸಿಮ್‌ ಸ್ಲಾಟ್ ಒಳಗೊಂಡಿದೆ.

ಈ ಟ್ಯಾಬ್ಲೆಟ್‌ 11.3 ಇಂಚು 2.4ಕೆ ಎಲ್‌ಸಿಡಿ ಪ್ಯಾನಲ್‌ 90 ಹರ್ಟ್ಸ್ ರಿಫ್ರೆಷ್ ರೇಟ್ ಇದೆ. 400 ನಿಟ್ಸ್‌ ಬ್ರೈಟ್‌ನೆಸ್‌ ಇರುವುದರಿಂದ ಬಿಸಿಲಿನಲ್ಲಿಯೂ ಬಳಸಬಹುದು. ಸ್ಪ್ಲಿಟ್‌ ಸ್ಕ್ರೀನ್‌ ಇದ್ದು, ಏಕಕಾಲಕ್ಕೆ ಹಲವು ಕೆಲಸಗಳನ್ನು ಸುಲಭವಾಗಿ ಮಾಡಬಹುದು. ಆಟೊ–ಕನೆಕ್ಟ್‌ ಸೌಲಭ್ಯ ಸಹ ಸ್ಮಾರ್ಟ್‌ಫೋನ್‌ ಜೊತೆ ಸಂಪರ್ಕಿಸಲು ನೆರವಾಗುತ್ತದೆ. ಟೈಪ್‌ ಸಿ ಯುಎಸ್‌ಬಿ ಪೋರ್ಟ್‌, ಆಡಿಯೊ ಡಿವೈಸ್‌ ಪೋರ್ಟ್‌ ಒಳಗೊಂಡಿದೆ.

ಮೀಡಿಯಾ ಟೆಕ್ ಹೀಲಿಯೊ ಜಿ99 ಪ್ರೊಸೆಸ್‌ ಇದ್ದು ಆಂಡ್ರಾಯ್ಡ್ 13 ಆಧಾರಿತ ಆಕ್ಸಿಜನ್‌ ಒಎಸ್ 13.2ನಿಂದ ಕಾರ್ಯಾಚರಿಸುತ್ತದೆ. ಮಧ್ಯಮ ಹಂತದ ಪ್ರೊಸೆಸರ್ ಇದಾಗಿದ್ದರೂ ಬ್ರೌಸಿಂಗ್‌, ಇ–ಮೇಲ್‌ ನೋಡುವುದು, ವಿಡಿಯೊ ನೋಡುವುದು, ಹೆಚ್ಚಿನ ರೆಸಲ್ಯೂಷನ್‌ ಇಲ್ಲದೆ ಗೇಮ್‌ ಆಡುವುದು… ಹೀಗೆ ನಿತ್ಯದ ಕೆಲಸಗಳನ್ನು ಯಾವುದೇ ಅಡೆತಡೆ ಇಲ್ಲದೆ ಮಾಡಬಹುದು. 8ಜಿಬಿ ರ್‍ಯಾಮ್‌ ಮತ್ತು 64ಜಿಬಿ ಸ್ಟೊರೇಜ್‌ ಹಾಗೂ 8ಜಿಬಿ ರ್‍ಯಾಮ್‌ ಮತ್ತು 128 ಜಿಬಿ ಸ್ಟೊರೇಜ್‌ನ (1ಟಿಬಿ ವರೆಗೆ ವಿಸ್ತರಣೆ) ಎರಡು ಆವೃತ್ತಿಗಳಲ್ಲಿ ಲಭ್ಯವಿದೆ.

ಕ್ಯಾಮೆರಾದ ಕಡೆಗೆ ಹೆಚ್ಚು ಗಮನ ಕೊಟ್ಟಿರುವ ಟ್ಯಾಬ್ಲೆಟ್‌ ಇದಲ್ಲ. ಹೀಗಾಗಿ 8ಎಂಪಿ ರಿಯರ್ ಮತ್ತು 8ಎಂಪಿ ಫ್ರಂಟ್‌ ಕ್ಯಾಮೆರಾ ಇರುವುದರಿಂದ ತಕ್ಕ ಮಟ್ಟಿಗೆ ಒಳ್ಳೆಯ ಚಿತ್ರ ಮತ್ತು ವಿಡಿಯೊ ಮಾಡಬಹುದು. ಫ್ರಂಟ್ ಕ್ಯಾಮೆರಾ ವಿಡಿಯೊ ಕಾಲ್‌ಗೆ ಬಳಸಲು ಅಡ್ಡಿ ಇಲ್ಲ. ಆದರೆ, ಸೆಲ್ಫಿಗೆ ಉತ್ತಮ ಅನ್ನಿಸುವುದಿಲ್ಲ.

ಒನ್‌ಪ್ಲಸ್‌ ಪ್ಯಾಡ್‌ನಂತೆ ಇದರ ಜೊತೆ ಮ್ಯಾಗ್ನೆಟಿಕ್‌ ಕೀಬೋರ್ಡ್‌ ಮತ್ತು ಸ್ಮಾರ್ಟ್‌ ಪೆನ್‌ ಸ್ಟೈಲೊ ಬಿಡುಗಡೆ ಮಾಡಿಲ್ಲ. ಕೇಸ್ ಮಾತ್ರ ಬಿಡುಗಡೆ ಮಾಡಿದ್ದು ಅದರ ಬೆಲೆ ₹99 ಇದೆ. ಒನ್‌ಪ್ಲಸ್‌ ಪ್ಯಾಡ್‌ ಗೊ ವೈ–ಫೈ ಆಯ್ಕೆ ಇರುವುದರ ಬೆಲೆ 8ಜಿಬಿ+128 ಜಿಬಿಗೆ ₹19,999 ಇದೆ. ಸಿಮ್‌ ಆಯ್ಕೆ (ಎಲ್‌ಟಿಇ) ಇರುವುದರ ಬೆಲೆ 8ಜಿಬಿ+128ಜಿಬಿಗೆ ₹21,999 ಮತ್ತು 8ಜಿಬಿ+256ಜಿಬಿಗೆ ₹23,999 ಇದೆ.

8 ಸಾವಿರ ಎಂಎಎಚ್‌ ಬ್ಯಾಟರಿ ಇದ್ದು, 33 ಡಬ್ಲ್ಯು ಫಾಸ್ಟ್ ಚಾರ್ಜಿಂಗ್ ಬೆಂಬಲಿಸುತ್ತದೆ. 40 ಗಂಟೆ ಮ್ಯೂಸಿಕ್ ಪ್ಲೇಬ್ಯಾಕ್‌ ಮತ್ತು 500 ಗಂಟೆ ಸ್ಟ್ಯಾಂಡ್‌ಬೈ ಸಾಮರ್ಥ್ಯ ಹೊಂದಿರುವುದಾಗಿ ಕಂಪನಿ ಹೇಳಿಕೊಂಡಿದೆ. ಆದರೆ, ಸರಾಸರಿ ಬಳಕೆಯಲ್ಲಿ ಎರಡು ದಿನಕ್ಕಂತೂ ಸಮಸ್ಯೆ ಇಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು