ಗೂಗಲ್ ತನ್ನ ಬಹುನಿರೀಕ್ಷಿತ ಸ್ಮಾರ್ಟ್ಫೋನ್ ಪಿಕ್ಸೆಲ್ 8 ಸರಣಿಯನ್ನು (Google Pixel 8 series) ಬಿಡುಗಡೆ ಮಾಡಲು ಸಜ್ಜಾಗಿದೆ ಎಂದು ಟೆಕ್ ಮೂಲಗಳು ವರದಿ ಮಾಡಿವೆ. ಇಂದು ಭಾರತದಲ್ಲಿ ಗೂಗಲ್ ಪಿಕ್ಸೆಲ್ 8 ಮತ್ತು ಗೂಗಲ್ ಪಿಕ್ಸೆಲ್ 8 ಪ್ರೊ ಬಿಡುಗಡೆಯಾಗಲಿದೆ.
ಪಿಕ್ಸೆಲ್ 8 ಮತ್ತು ಪಿಕ್ಸೆಲ್ 8 ಪ್ರೊ ಫೋನ್ಗಳು ಸ್ಲಿಮ್ ಬೆಜೆಲ್ಗಳು ಮತ್ತು ಪಂಚ್-ಹೋಲ್ ನಾಚ್ ವಿನ್ಯಾಸವನ್ನು ಹೊಂದಿವೆ. ಸೋರಿಕೆಯಾದ ಮಾಹಿತಿಯ ಪ್ರಕಾರ, ಗೂಗಲ್ ಪಿಕ್ಸೆಲ್ 8 ಸ್ಮಾರ್ಟ್ಫೋನ್ 6.17-ಇಂಚಿನ ಪೂರ್ಣ HD AMOLED ಡಿಸ್ ಪ್ಲೇಯೊಂದಿಗೆ 120HZ ರಿಫ್ರೆಶ್ ದರ ಮತ್ತು 2400×1080 ಪಿಕ್ಸೆಲ್ ರೆಸಲ್ಯೂಶನ್ನೊಂದಿಗೆ ಬರುತ್ತದೆ.
ಮತ್ತೊಂದೆಡೆ, ಪ್ರೀಮಿಯಂ ಫೋನ್ ಪಿಕ್ಸೆಲ್ 8 ಪ್ರೊನಲ್ಲಿ 3120×1440 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ 6.7-ಇಂಚಿನ OLED ಡಿಸ್ ಪ್ಲೇಯನ್ನು ನೋಡಬಹುದು. ಪಿಕ್ಸೆಲ್ 8 ನಂತೆ, ಪಿಕ್ಸೆಲ್ 8 ಪ್ರೊ ಕೂಡ 120Hz ವರೆಗೆ ರಿಫ್ರೆಶ್ ದರವನ್ನು ಹೊಂದಿರಬಹುದು ಎನ್ನಲಾಗ್ತಿದೆ.
ಬೆಲೆಗೆ ಸಂಬಂಧಿಸಿದಂತೆ, ಗೂಗಲ್ ಪಿಕ್ಸೆಲ್ 8 ಫೋನಿನ ನಿಖರ ಬೆಲೆ ಬಹಿರಂಗವಾಗಿಲ್ಲ. ಆದರೆ, ವಿದೇಶದಲ್ಲಿ ಇದರ ಬೆಲೆ ಯುರೋ 799, ಅಂದರೆ ಭಾರತದಲ್ಲಿ ಸುಮಾರು 70,200 ರೂ. ಇರಬಹುದು. ಅಂತೆಯೆ ಗೂಗಲ್ ಪಿಕ್ಸೆಲ್ 8 ಪ್ರೊನ ಆರಂಭಿಕ ಬೆಲೆಯು ಯುರೋ 1099 (ಸುಮಾರು ರೂ. 96,500) ಆಗಿರುತ್ತದೆ.
ಇನ್ನು ಎರಡೂ ಸ್ಮಾರ್ಟ್ಫೋನ್ಗಳು ಆಕರ್ಷಕವಾದ 50-ಮೆಗಾಪಿಕ್ಸೆಲ್ ಪ್ರೈಮರಿ ರಿಯರ್ ಕ್ಯಾಮೆರಾವನ್ನು ಸೆಟಪ್ ಅನ್ನು ಹೊಂದಿರಲಿದೆ. ಪಿಕ್ಸೆಲ್ 8 ಅಲ್ಟ್ರಾ-ವೈಡ್-ಆಂಗಲ್ ಶಾಟ್ಗಳಿಗಾಗಿ ಸೋನಿ IMX386 ಸಂವೇದಕದೊಂದಿಗೆ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಬಹುದು. ಪಿಕ್ಸೆಲ್ 8 ಪ್ರೊ 64-ಮೆಗಾಪಿಕ್ಸೆಲ್ ಮತ್ತು 48-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾದೊಂದಿಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ.