News Karnataka Kannada
Friday, May 17 2024
ಕ್ರೀಡೆ

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಬಾಂಗ್ಲಾ ತಂಡದ ನಾಯಕ

Tamim Iqbal
Photo Credit :

ಬಾಂಗ್ಲಾದೇಶದ ಏಕದಿನ ತಂಡದ ನಾಯಕ ತಮೀಮ್ ಇಕ್ಬಾಲ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಹಠಾತ್ ನಿವೃತ್ತಿ ಘೋಷಿಸುವ ಮೂಲಕ ಕ್ರಿಕೆಟ್ ಜಗತ್ತಿಗೆ ಆಘಾತ ನೀಡಿದ್ದಾರೆ. ಪ್ರಸ್ತುತ ಅಫ್ಘಾನಿಸ್ತಾನ ವಿರುದ್ಧ ಬಾಂಗ್ಲಾ ತಂಡ ಏಕದಿನ ಸರಣಿ ಆಡುತ್ತಿದ್ದು, ಅಫ್ಘಾನ್ ವಿರುದ್ಧ ಮೊದಲ ಏಕದಿನ ಪಂದ್ಯ ಸೋತ ಬಳಿಕ ತಮೀಮ್ ತಮ್ಮ ನಿವೃತ್ತಿ ನಿರ್ಧಾರಕ್ಕೆ ಬಂದಿದ್ದಾರೆ.

ಈ ಬಗ್ಗೆ ಭಾವನಾತ್ಮಕ ಹೇಳಿಕೆ ನೀಡಿರುವ ತಮೀಮ್, ‘‘ತಂಡದ ಯಶಸ್ಸಿಗೆ ನಾನು ನನ್ನ ಅತ್ಯುತ್ತಮವಾದದನ್ನು ನೀಡಿದ್ದೇನೆ. ನಾನು ಈ ಕ್ಷಣದಿಂದ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿದ್ದೇನೆ. ನನಗೆ ಸಹಕರಿಸಿದ ನನ್ನ ಎಲ್ಲಾ ತಂಡದ ಸಹ ಆಟಗಾರರು, ತರಬೇತುದಾರರು, ಬಿಸಿಬಿ ಅಧಿಕಾರಿಗಳು, ನನ್ನ ಕುಟುಂಬ ಸದಸ್ಯರು ಮತ್ತು ನನ್ನ ಎಲ್ಲ ಸದಸ್ಯರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಸುದೀರ್ಘ ಪ್ರಯಾಣದಲ್ಲಿ ನನ್ನೊಂದಿಗೆ ಇದ್ದವರಿಗೆ, ನನ್ನ ಮೇಲೆ ನಂಬಿಕೆ ಇಟ್ಟಿದ್ದವರಿಗೆ ಹಾಗೂ ಅಭಿಮಾನಿಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನಿಮ್ಮ ಪ್ರೀತಿ ಮತ್ತು ನನ್ನ ಮೇಲೆ ನೀವು ಇಟ್ಟಿದ್ದ ನಂಬಿಕೆ ಬಾಂಗ್ಲಾದೇಶಕ್ಕಾಗಿ ನನ್ನ ಅತ್ಯುತ್ತಮವಾದದ್ದನ್ನು ನೀಡಲು ನನಗೆ ಸ್ಫೂರ್ತಿ ನೀಡಿದೆ’’ ಎಂದು ತಮೀಮ್ ಹೇಳಿಕೊಂಡಿದ್ದಾರೆ.

ಮಾಹಿತಿ ಪ್ರಕಾರ ಸ್ಥಳೀಯ ಕಾಲಮಾನ ಮಧ್ಯಾಹ್ನ 12 ಗಂಟೆಗೆ ಹಠಾತ್ ಪತ್ರಿಕಾಗೋಷ್ಠಿ ಕರೆದ ತಮೀಮ್ ಇಕ್ಬಾಲ್ ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು