ನವದೆಹಲಿ: 2024ರ ಐಪಿಎಲ್ ಕ್ರಿಕೆಟ್ ಟೂರ್ನಿ ಆರಂಭವಾಗುವ ಮೊದಲೇ ತಂಡಗಳಲ್ಲಿ ಭಾರಿ ಬದಲಾವಣೆ ಆಗುತ್ತಿದೆ. ಭಾರತ ಕ್ರಿಕೆಟ್ ತಂಡದ ಭರವಸೆಯ ಆಟಗಾರ, ವಿಶ್ವಕಪ್ನಲ್ಲೂ ಉತ್ತಮ ಪ್ರದರ್ಶನ ತೋರಿ ಸೈ ಎನಿಸಿಕೊಂಡಿರುವ ಶುಭಮನ್ ಗಿಲ್ ಅವರು ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ.
ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿದ ಹಿನ್ನೆಲೆಯಲ್ಲಿ ಗುಜರಾತ್ ಟೈಟಾನ್ಸ್ ತಂಡವು ಶುಭಮನ್ ಗಿಲ್ ಅವರನ್ನು ನಾಯಕ ಎಂದು ಘೋಷಿಸಿದೆ.
ಕಳೆದ ಐಪಿಎಲ್ ಋತುವಿನಲ್ಲಿ 890 ರನ್ ಗಳಿಸಿ ಟೂರ್ನಿಯ ಅತ್ಯಧಿಕ ರನ್ ಸ್ಕೋರರ್ ಎನಿಸಿದ 24 ವರ್ಷದ ಶುಭಮನ್, ಏಕದಿನ ಹಾಗೂ ಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಭರವಸೆ ಮೂಡಿಸಿದ್ದಾರೆ. ಕಳೆದ ಮೂರ್ನಾಲ್ಕು ಐಪಿಎಲ್ಗಳಲ್ಲಿ ಅವರಿಂದ ರನ್ಗಳು ಹರಿದುಬಂದಿವೆ. ಮೇಲಾಗಿ ಯಾವಾಗಲೂ ಸಮಚಿತ್ತತೆಯಿಂದ ಇರುವ ಶುಭಮನ್ ಗಿಲ್, ತಂಡವನ್ನು ಮುನ್ನಡೆಸಲು ಸಮರ್ಥ ಎಂಬುದನ್ನು ಗುಜರಾತ್ ಟೈಟಾನ್ಸ್ ತಂಡದ ಮ್ಯಾನೇಜ್ಮೆಂಟ್, ಅವರನ್ನೇ ನಾಯಕ ಎಂದು ಘೋಷಿಸಿದೆ ಎಂದು ಮೂಲಗಳು ತಿಳಿಸಿವೆ.
ಐಪಿಎಲ್ನಲ್ಲಿ 91 ಪಂದ್ಯಗಳನ್ನು ಆಡಿರುವ ಶುಭಮನ್ ಗಿಲ್ 2,790 ರನ್ ಗಳಿಸಿದ್ದಾರೆ.