ಮಂಗಳೂರು: ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ & ಮ್ಯಾನೇಜ್‌ಮೆಂಟ್, ಮಂಗಳೂರು, ಸಂಸ್ಥೆಯ ಕ್ರೀಡಾಪಟುಗಳು ಮತ್ತೊಮ್ಮೆ ಗಮನರ‍್ಹ ಸಾಧನೆ ಮಾಡಿದ್ದಾರೆ. 2026ರ ಸೆಪ್ಟೆಂಬರ್ 7 ಮತ್ತು 8ರಂದು ಮೈಸೂರಿನ VTU ಪ್ರಾದೇಶಿಕ ಕೇಂದ್ರದಲ್ಲಿ ನಡೆದ 28ನೇ VTU ರಾಜ್ಯಮಟ್ಟದ ಅಂತರ ಕಾಲೇಜು ಕ್ರಾಸ್ ಕಂಟ್ರಿ (ಪುರುಷ ಮತ್ತು ಮಹಿಳಾ) ಚಾಂಪಿಯನ್‌ಶಿಪ್‌ನಲ್ಲಿ ಸಹ್ಯಾದ್ರಿ ಕಾಲೇಜಿನ ಮಹಿಳಾ ತಂಡ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದರೆ, ಪುರುಷರ ತಂಡ ರನ್ನರ್‌ಅಪ್ ಸ್ಥಾನ ಪಡೆದುಕೊಂಡಿದೆ.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (VTU) ವಿವಿಧ ಅಂಗಸಂಸ್ಥೆಗಳ 228ಕ್ಕೂ ಅಧಿಕ ಕ್ರೀಡಾಪಟುಗಳು ಈ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದರು.

ಮಹಿಳಾ ವಿಭಾಗದ ಪದಕ ವಿಜೇತರು
• ಕು. ವೀಕ್ಷಾ ವಿ. – ಚಿನ್ನದ ಪದಕ
• ಕು. ಸಾನಿಯಾ ಶೆಟ್ಟಿ – ಬೆಳ್ಳಿಯ ಪದಕ
• ಕು. ವೈಷ್ಣವಿ ಪಡಸಲಗಿ – ಕಂಚಿನ ಪದಕ

ಸಹ್ಯಾದ್ರಿ ಮಹಿಳಾ ಕ್ರಾಸ್ ಕಂಟ್ರಿ ತಂಡ
• ಸಹಿತ್ಯ ಕೆ. ಪಿ.
• ಸಾನಿಯಾ ಶೆಟ್ಟಿ
• ವೀಕ್ಷಾ ವಿ.
• ತ್ರಿಶಾ ಶೆಟ್ಟಿ
• ವೈಷ್ಣವಿ ಪಡಸಲಗಿ
• ಶ್ರೇಯಾ ಮೋಹನ್ ನಾಯಕ್

ಸಹ್ಯಾದ್ರಿ ಪುರುಷರ ಕ್ರಾಸ್ ಕಂಟ್ರಿ ತಂಡ
• ಮನ್ವಿತ್ ಯು.
• ಆದಿತ್ಯ ಕೆ. ಎಸ್.
• ಪ್ರವಿತ್
• ಗುರುಪ್ರಸಾದ್
• ಪ್ರದ್ಯುನ್
• ಪ್ರಜ್ವಲ್

ಈ ಸಾಧನೆಗಾಗಿ ಸಹ್ಯಾದ್ರಿ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕರ ಹಾಗೂ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗ ಕ್ರೀಡಾಪಟುಗಳನ್ನು ಅಭಿನಂದಿಸಿ, ಅವರ ಮುಂದಿನ ಕ್ರೀಡಾ ಚಟುವಟಿಕೆಗಳಿಗೆ ಶುಭ ಹಾರೈಸಿದ್ದಾರೆ.