ಇಂದು(ಸೆ.11) ಚಂದನವನದ ತೆರೆಗಳಲ್ಲಿ ನಾಲ್ಕು ಸಿನಿಮಾಗಳು ತೆರೆಕಾಣುತ್ತಿವೆ.
ಅಮೆರಿಕಾ ಅಮೆರಿಕಾ–2
ನಾಗತಿಹಳ್ಳಿ ಚಂದ್ರಶೇಖರ ನಿರ್ದೇಶನದ ಚಿತ್ರವಿದು. ಸಹನಾ ವಿಜಯಕುಮಾರ್ ಅವರ ‘ಕ್ಷಮೆ’ ಕಾದಂಬರಿಯನ್ನು ಆಧಾರವಾಗಿಟ್ಟುಕೊಂಡು ಹೊಸ ಅಂಶಗಳನ್ನು ಸೇರಿಸಿ ಈ ಸಿನಿಮಾ ರಚನೆಯಾಗಿದೆ.
ನಾಗತಿಹಳ್ಳಿ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಸಿನಿಮಾಗೆ ನಾಗತಿಹಳ್ಳಿ ಚಂದ್ರಶೇಖರ ಅವರೇ ಚಿತ್ರಕಥೆ ಬರೆದಿದ್ದಾರೆ. ಚಿತ್ರಕ್ಕೆ ಮನೋಮೂರ್ತಿ ಸಂಗೀತ ನಿರ್ದೇಶನವಿದ್ದು, ಎಸ್.ಕೆ.ರಾವ್ ಛಾಯಾಚಿತ್ರಗ್ರಹಣ, ನಕುಲ್ ಅಭ್ಯಂಕರ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ.
ಶಾನ್ವಿ ಶ್ರೀವಾಸ್ತವ್, ನಿರೂಪ್ ಭಂಡಾರಿ, ಪೃಥ್ವಿ ಅಂಬಾರ್ ಪ್ರಮುಖಪಾತ್ರದಲ್ಲಿ ಅಭಿನಯಿಸಿದ್ದಾರೆ. ಅಚ್ಯುತ್‌ಕುಮಾರ್, ರೀತು ಸಿಂಗ್, ಮಂಡ್ಯ ರಮೇಶ್, ಮಾನಸಿ ಸುಧೀರ್ ತಾರಾಬಳಗದಲ್ಲಿದ್ದಾರೆ.
ವಿಡಿಯೊ
‘ಬ್ಲಿಂಕ್’, ‘ಜೆರಾಕ್ಸ್’ ಖ್ಯಾತಿಯ ನಿರ್ದೇಶಕ ಶ್ರೀನಿಧಿ ಬೆಂಗಳೂರು ನಿರ್ದೇಶನದ ಸಿನಿಮಾವಿದು. ಸಿನಿಮಾ ‘ಫೌಂಡ್ ಫುಟೇಜ್’ ಜಾನರ್‌ನಲ್ಲಿದ್ದು,ನಟ ದೀಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿದ್ದಾರೆ. ಭರತ, ಜೀವನ್ ಶಿವಕುಮಾರ್, ತೇಜೇಶ್, ಪ್ರಿಯಾ ಜೆ.ಆಚಾರ್, ನಲ್ಮೆ ನಾಚಿಯಾರ್ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ. ಪ್ರಸನ್ನ ಕುಮಾರ್ ಸಂಗೀತ, ಅವಿನಾಶ್ ಶಾಸ್ತ್ರಿ ಛಾಯಾಚಿತ್ರಗ್ರಹಣ ಸಿನಿಮಾಗಿದೆ.
ಈ ಸಿನಿಮಾಗಳ ಜೊತೆಗೆ ವಿಕ್ರಮ್ ಧನಂಜಯ ಆರ್. ನಿರ್ದೇಶನದ ‘ಸಾಲಗಾರರ ಸಹಕಾರ ಸಂಘ’ ಮತ್ತು ಒಎಸ್‌ಆರ್ ಕುಮಾರ್ ನಿರ್ದೇಶನದ ‘ನಮ್ಮ ರೇಂಜ್ ರೋವರ್’ ಸಿನಿಮಾಗಳೂ ತೆರೆಕಂಡಿವೆ.

