News Karnataka Kannada
Wednesday, May 01 2024
ಕ್ರೀಡೆ

ಭಾರತೀಯ ವನಿತಾ ಕ್ರಿಕೆಟ್‌ ತಂಡದ ಮಾಜಿ ನಾಯಕಿ ರುಮೇಲಿ ಧರ್‌ ಕ್ರಿಕೆಟ್‌ಗೆ ವಿದಾಯ

Rumeli
Photo Credit :

ಕೋಲ್ಕತಾ: ಭಾರತೀಯ ವನಿತಾ ಕ್ರಿಕೆಟ್‌ ತಂಡದ ಮಾಜಿ ನಾಯಕಿ, ಆಲ್‌ರೌಂಡರ್‌ ರುಮೇಲಿ ಧರ್‌ ಎಲ್ಲ ಮಾದರಿಯ ಕ್ರಿಕೆಟಿಗೆ ಬುಧವಾರ ಗುಡ್‌ಬೈ ಹೇಳಿದರು.

38 ವರ್ಷದ ರುಮೇಲಿ ಧರ್‌ ಭಾರತದ ಪರ 4 ಟೆಸ್ಟ್‌, 78 ಏಕದಿನ ಹಾಗೂ 18 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ.

ಸುದೀರ್ಘ‌ 6 ವರ್ಷಗಳ ವಿರಾಮದ ಬಳಿಕ 2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪುನರಾಗಮನ ಆಗಿದ್ದರು. ಅಂದು ಗಾಯಾಳು ಜೂಲನ್‌ ಗೋಸ್ವಾಮಿ ಬದಲು ಭಾರತ ತಂಡವನ್ನು ಪ್ರವೇಶಿಸಿ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯಲ್ಲಿ ಪಾಲ್ಗೊಂಡಿದ್ದರು. 2005ರ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾರತ ಫೈನಲ್‌ ತಲುಪುವಲ್ಲಿ ರುಮೇಲಿ ಧರ್‌ ಪಾತ್ರ ವಹಿಸಿದ್ದರು.

2003ರಲ್ಲಿ ಇಂಗ್ಲೆಂಡ್‌ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪದಾರ್ಪಣೆಗೈದಿದ್ದ, ರುಮೇಲಿ ಧರ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ 236 ರನ್‌ ಹಾಗೂ 8 ವಿಕೆಟ್‌; ಏಕದಿನದಲ್ಲಿ 961 ರನ್‌ ಮತ್ತು 63 ವಿಕೆಟ್‌; ಟಿ20ಯಲ್ಲಿ 131 ರನ್‌ ಹಾಗೂ 13 ವಿಕೆಟ್‌ ಸಂಪಾದಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು