ಗುವಾಹಟಿ: ಐಪಿಎಲ್‌ ಪಂದ್ಯಾವಳಿಯಲ್ಲಿ ಉತ್ತಮ ಫಾರ್ಮ್‌ನಲ್ಲಿರುವ 2 ತಂಡಗಳು ಶುಕ್ರವಾರ ಮುಖಾಮುಖಿಯಾಗುತ್ತಿದೆ. ಹಾಲಿ ಚಾಂಪಿಯನ್‌ ಆರ್‌ಸಿಬಿ ತಂಡವು ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಎದುರಿಸುತ್ತಿದೆ.

ಆರ್‌ಸಿಬಿ ಪರ ಕೊಹ್ಲಿ, ಸಾಲ್ಟ್‌, ಪಡಿಕ್ಕಲ್‌, ಪಾಟಿದಾರ್‌, ಟಿಮ್‌ ಡೇವಿಡ್‌ ಈಗಾಗಲೇ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಅಲ್ಲದೆ ಜಿತೇಶ್‌, ಶೆಫರ್ಡ್‌, ವೆಂಕಟೇಶ್‌ ಅಯ್ಯರ್‌ರಂತಹ ಸ್ಫೋಟಕ ಬ್ಯಾಟರ್‌ಗಳ ಪಡೆಯನ್ನೇ ಆರ್‌ಸಿಬಿ ಹೊಂದಿದೆ. ರಾಜಸ್ಥಾನದಲ್ಲಿ ವೈಭವ್‌ ಸೂರ್ಯವಂಶಿ, ಯಶಸ್ವಿ ಜೈಸ್ವಾಲ್‌ ಈವರೆಗೆ ಮಿಂಚಿದ್ದು ಈ ಜೋಡಿ ಮತ್ತೊಮ್ಮೆ ಉತ್ತಮ ರನ್‌ ಕಲೆ ಹಾಕುವ ಸಾಧ್ಯತೆ ಇದೆ. ಇದಾದ ಬಳಿಕ ಪರಾಗ್‌, ಹೆಟ್ಮಾಯರ್‌, ಜುರೆಲ್‌ರಂತಹ ಬ್ಯಾಟರ್‌ಗಳು ತಂಡದಲ್ಲಿದ್ದಾರೆ.

ಈ ಬಾರಿಯ ಐಪಿಎಲ್‌ನಲ್ಲಿ ಇತರ ತಂಡಗಳಿಗೆ ಹೋಲಿಸಿದರೆ ಈ 2 ತಂಡಗಳು ಉತ್ತಮ ಬೌಲಿಂಗ್‌ ಪ್ರದರ್ಶನ ನೀಡಿವೆ. ಜಾಕಬ್‌ ಡಫಿ, ಭುವನೇಶ್ವರ್‌, ಕೃಣಾಲ್‌, ಸುಯಶ್‌ ಆರ್‌ಸಿಬಿಗೆ ವರವಾಗುವ ಸಾಧ್ಯತೆ ಇದೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಗುರಿ ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು ರಾಜಸ್ಥಾನ ಬೌಲರ್‌ಗಳ ಆತ್ಮವಿಶ್ವಾಸವನ್ನು ಹೆಚ್ಚು ಮಾಡಿದೆ. ಆಡಿರುವ 3 ಪಂದ್ಯಗಳಲ್ಲೂ ರಾಯಲ್ಸ್‌ ಬೌಲರ್‌ಗಳು ಶಿಸ್ತು ಪ್ರದರ್ಶಿಸಿದ್ದಾರೆ.

ಆರ್‌ಸಿಬಿ: ಕೊಹ್ಲಿ, ಸಾಲ್ಟ್‌, ಪಡಿಕ್ಕಲ್‌, ಪಾಟಿದಾರ್‌(ನಾಯಕ), ಜಿತೇಶ್‌, ಟಿಮ್‌, ಶೆಫರ್ಡ್‌, ಕೃಣಾಲ್‌, ಭುವಿ, ಅಭಿನಂದನ್‌, ಡಫಿ

ರಾಜಸ್ಥಾನ್‌: ಜೈಸ್ವಾಲ್‌, ವೈಭವ್‌, ಜುರೇಲ್‌, ಪರಾಗ್‌ (ನಾಯಕ), ಹೆಟ್ಮಾಯರ್‌, ಫೆರೇರಿಯಾ, ಜಡೇಜಾ, ಬರ್ಗರ್‌, ತುಷಾರ್‌, ಸಂದೀಪ್‌