ಬೆಂಗಳೂರು: ಐಪಿಎಲ್‌ನ 2 ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಇಂದು ಬೆಂಗಳೂರಿನಲ್ಲಿ ಹಣಾಹಣಿಗೆ ಸಜ್ಜಾಗಿವೆ.
ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭದ್ರತೆಯ ಪ್ರಮಾಣ ತುಸು ಹೆಚ್ಚಿದ್ದು, ಸುಮಾರು 2,300 ಪೊಲೀಸರನ್ನ ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿದೆ.
ಈ ಬಾರಿ ಎರಡು ಹೆಚ್ಚುವರಿ ಬ್ಯಾಗೇಜ್ ಕೌಂಟರ್‌ಗಳನ್ನು ನಿರ್ಮಿಸಲಾಗಿದ್ದು, ಪ್ರೇಕ್ಷಕರ ಅನುಕೂಲಕ್ಕೆ ನೆರವಾಗಲಿದೆ. ಕಳೆದ ಬಾರಿ ಪಂದ್ಯದ ವೇಳೆ 70ಕ್ಕೂ ಹೆಚ್ಚು ಮೊಬೈಲ್‌ಗಳು ಕಳ್ಳತನವಾಗಿದ್ದವು. ಈ ಘಟನೆಗಳನ್ನು ಮನಗಂಡು, ಕಳ್ಳರ ಬಗ್ಗೆ ಎಚ್ಚರದಿಂದಿರಲು ಕ್ರಿಕೆಟ್ ಪ್ರಿಯರಿಗೆ ವಿಶೇಷ ಸೂಚನೆಗಳನ್ನು ನೀಡಲಾಗಿದೆ.
ಸ್ಟೇಡಿಯಂ ಆವರಣದಲ್ಲಿ ಹೆಚ್ಚು ಸೈನ್ ಬೋರ್ಡ್‌ಗಳನ್ನು ಅಳವಡಿಸುವುದರ ಜೊತೆಗೆ, ಮೈಕ್ ಮೂಲಕವೂ ಪದೇ ಪದೇ ಅನೌನ್ಸ್‌ಮೆಂಟ್‌ಗಳನ್ನು ಮಾಡಿ ಜಾಗೃತಿ ಮೂಡಿಸಲಾಗುವುದು.
ಪಂದ್ಯ ವೀಕ್ಷಣೆಗೆ ಬರುವ ಅಪಾರ ಜನಸಂದಣಿಯನ್ನ ನಿಯಂತ್ರಿಸಲು ವಿಶೇಷ BMTC ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಪಾರ್ಕಿಂಗ್ ಪ್ರದೇಶಗಳು ಮತ್ತು ಮೆಟ್ರೋ ಸಂಚಾರ ಸಮಯ ಕಳೆದ ಬಾರಿಯಂತೆಯೇ ಇರಲಿದೆ. ಟಿಕೆಟ್ ಇಲ್ಲದವರಿಗೆ ಸ್ಟೇಡಿಯಂ ಬಳಿ ಪ್ರವೇಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

