ನಂಜನಗೂಡು: ಕಾಯಕಯೋಗಿ ಪ್ರಾದೇಶಿಕ ದಿನಪತ್ರಿಕೆಯಿಂದ ನೀಡುವ ವಾರ್ಷಿಕ “ಕಾಯಕಯೋಗಿ” ಪ್ರಶಸ್ತಿಯನ್ನು ಪತ್ರಕರ್ತ ಸಿಎಂ ಸುಗಂಧರಾಜುರವರಿಗೆ ನೀಡಿ ಗೌರವಿಸಲಾಯಿತು. ಮೈಸೂರಿನ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದಲ್ಲಿ ಕಾಯಕಯೋಗಿ ಪ್ರಾದೇಶಿಕ ದಿನಪತ್ರಿಕೆಯೂ ಎಂಟನೇ ವರ್ಷವನ್ನು ಪೂರೈಸಿ, ಒಂಬತ್ತನೇ ವರ್ಷದ ವಸಂತಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿಯಲ್ಲಿ ಕಾಯಕಯೋಗಿ ಪ್ರಾದೇಶಿಕ ದಿನಪತ್ರಿಕೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾಯಕಯೋಗಿ ದಿನಪತ್ರಿಕೆಯ ಸಂಪಾದಕರಾದ ಬಿ.ಕೆ ಅರುಣಜ್ಯೋತಿ ರವರು ವಾರ್ಷಿಕ ಕಾಯಕಯೋಗಿ ಪ್ರಶಸ್ತಿಯನ್ನು ಪತ್ರಕರ್ತ ಸಿ.ಎಂ ಸುಗಂಧರಾಜುರವರಿಗೆ ಘೋಷಣೆ ಮಾಡಿ ಪ್ರದಾನ ಮಾಡಿದರು. ಉತ್ತಮ ವರದಿಗಾರಿಕೆಯಲ್ಲಿ ಮೈಸೂರು ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ವಿಶೇಷ ವರದಿಗಳಲ್ಲಿ ಮೊದಲ ಸ್ಥಾನದಲ್ಲಿ ನಂಜನಗೂಡು ತಾಲ್ಲೂಕು ವರದಿಗಾರರಾಗಿರುವ ಸಿಎಂ ಸುಗಂಧರಾಜು ರವರು ಸಾಮಾಜಿಕ ಕಳಕಳಿ, ನೊಂದವರ ಪರವಾಗಿ ನಿಂತು ತಮ್ಮ ವರದಿಗಳ ಮೂಲಕ ನ್ಯಾಯ ಒದಗಿಸುವುದು, ಜನರ ಸಮಸ್ಯೆಗಳು ಜನಪರ ವರದಿಗಳ ಬಗ್ಗೆ ಪ್ರಕಟವಾಗಿರುವ ವರದಿಯ ಆಧಾರದ ಮೇಲೆ ಮತ್ತು ಕಳೆದ ಒಂದು ವರ್ಷದಲ್ಲಿ ಅವರು ಮಾಡಿರುವ ಸುಮಾರು 75 ವಿಶೇಷ ವರದಿಗಳನ್ನು ಆಧರಿಸಲಾಗಿದೆ.

ಹದಿನಾರು ಗ್ರಾಮದಲ್ಲಿದ್ದ ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯ ಅವ್ಯವಸ್ಥೆ ಕುರಿತು ಪ್ರಕಟವಾದ ವಿಶೇಷ ವರದಿಯು ಸರ್ಕಾರದ ಗಮನವನ್ನು ಸೆಳೆದು ಮಕ್ಕಳಿಗೆ ಅನುಕೂಲವಾಗುವಂತೆ ಪರಿಣಾಮ ಬೀರಿತ್ತು. ಹಾಗೂ ಹೊಸಹಳ್ಳಿ ಗ್ರಾಮದಲ್ಲಿ ಸ್ಮಶಾನಕ್ಕೆ ದಾರಿ ಯಾವುದಯ್ಯ ಎನ್ನುವ ಶೀರ್ಷಿಕೆಯಲ್ಲಿ ವರದಿ ಮಾಡಲಾಗಿತ್ತು. ಹಾಗೂ ಇನ್ನುಳಿದ 73 ವರದಿಗಳು ಸಾಮಾನ್ಯ ಜನರ ಸಮಸ್ಯೆಗಳ ಕುರಿತು ಪ್ರಕಟವಾದ ವರದಿಗಳು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನವನ್ನು ಸೆಳೆದು, ಸಮಸ್ಯೆಗಳಿಗೆ ಫಲಶ್ರುತಿ ಸಿಕ್ಕಿದೆ. ಸಾಕಷ್ಟು ಸಮಸ್ಯೆಗಳು ಇವರ ವರದಿಗಳ ಮೂಲಕ ಬಗೆಹರಿದಿದೆ. ಇದನ್ನೆಲ್ಲವನ್ನು ಗಮನದಲ್ಲಿಟ್ಟುಕೊಂಡು ಸಿಎಂ ಸುಗಂಧರಾಜು ರವರಿಗೆ ವರ್ಷದ ಉತ್ತಮ ವರದಿಗಾರರು ಹಾಗೂ ಕಾಯಕಯೋಗಿ ವಾರ್ಷಿಕ ಪ್ರಶಸ್ತಿ ಮತ್ತು ನಗದು ಬಹುಮಾನವನ್ನು ನೀಡಿ ಗೌರವಿಸಲಾಗುತ್ತದೆ ಎಂದು ಸಂಪಾದಕರಾದ ಬಿ.ಕೆ ಅರುಣಜ್ಯೋತಿ ರವರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ವರದಿಗಾರರಾದ ಆನಂತ್ ಕುಮಾರ್, ಚಾಮರಾಜನಗರ ಜಿಲ್ಲಾ ವರದಿಗಾರರಾದ ಮಾದೇಶ್, ಹಾಸನ ಜಿಲ್ಲಾ ವರದಿಗಾರರಾದ ಸಂದೀಪ್, ತುಮಕೂರು ಜಿಲ್ಲಾ ವರದಿಗಾರರಾದ ಮಂಜುಸ್ವಾಮಿ, ರಾಮನಗರ ಜಿಲ್ಲೆ ವರದಿಗಾರರಾದ ರಾಜು, ಮಂಡ್ಯ ಜಿಲ್ಲಾ ವರದಿಗಾರರಾದ ಪ್ರತಾಪ್, ಕನಕಪುರ ಗಿರೀಶ್, ಹುಣಸೂರು ರವಿಕುಮಾರ್, ಗುಂಡ್ಲುಪೇಟೆ ಕಾಂತರಾಜ್, ಹೆಚ್.ಡಿ ಕೋಟೆ ಶಿವು, ಪಿರಿಯಾಪಟ್ಟಣ ಅಶೋಕ್, ಹನೂರು ಶಿವಕುಮಾರ್ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಪತ್ರಕರ್ತರು ಹಾಜರಿದ್ದರು.