News Karnataka Kannada
Monday, April 29 2024
ಕ್ರೀಡೆ

ಅಭಿಮಾನಿಗಳ ಕನಸು ನನಸು: ಆರ್​ಸಿಬಿ ಮುಡಿಗೆ ಡಬ್ಲ್ಯುಪಿಎಲ್ ಚಾಂಪಿಯನ್ ಕಿರೀಟ

Rcb (1)
Photo Credit : News Kannada

ವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳೆಯರ ತಂಡವು ಭಾನುವಾರ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯ ಪ್ರಶಸ್ತಿ ಗೆದ್ದಿತು. ಆರ್‌ಸಿಬಿ ತಂಡದ ಅಭಿಮಾನಿಗಳ ‘ಕನಸು’ ಈಡೇರಿತು. ಆರ್‌ಸಿಬಿ ಪುರುಷರ ತಂಡವು 16 ವರ್ಷಗಳಿಂದ ಪ್ರಶಸ್ತಿ ಜಯಿಸುವ ಕನಸು ಈಡೇರಿಲ್ಲ.

ಆದರೆ ಇದೀಗ ಸ್ಮೃತಿ ಮಂದಾನ ನಾಯಕತ್ವದ ಮಹಿಳಾ ತಂಡವು ಡಬ್ಲ್ಯುಪಿಎಲ್‌ನ ಎರಡನೇ ಆವೃತ್ತಿಯಲ್ಲಿಯೇ ಪ್ರಶಸ್ತಿ ಜಯಿಸಿತು. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ 8 ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಜಯಭೇರಿ ಬಾರಿಸಿತು.

ಆರ್‌ಸಿಬಿ ತಂಡದ ಸೋಫಿ ಮಾಲಿನೊ ಅವರ ‘ಮ್ಯಾಜಿಕ್ ಓವರ್’ ಮತ್ತು ಕನ್ನಡತಿ ಶ್ರೇಯಾಂಕ ಪಾಟೀಲ ಸ್ಪಿನ್ ಮೋಡಿಯಿಂದಾಗಿ ಬೆಂಗಳೂರು ತಂಡವು ಜಯಭೇರಿ ಬಾರಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಡೆಲ್ಲಿ ತಂಡವು 18.3 ಓವರ್‌ಗಳಲ್ಲಿ 113 ರನ್‌ ಗಳಿಸಿತು. ಈ ಸಾಧಾರಣ ಗುರಿ ಬೆನ್ನಟ್ಟಿದ ಆರ್‌ಸಿಬಿಗೆ ಜಯ ಸುಲಭವಾಗಿ ಒಲಿಯಲಿಲ್ಲ. ಡೆಲ್ಲಿ ಬೌಲರ್‌ಗಳ ತಂತ್ರಗಾರಿಕೆಯನ್ನು ಎಚ್ಚರಿಕೆಯಿಂದ ಎದುರಿಸುವ ಸವಾಲನ್ನು ಆರ್‌ಸಿಬಿ ಎದುರಿಸಿತು. ಇದರಿಂದಾಗಿ ಫಲಿತಾಂಶವು ಕೊನೆಯ ಓವರ್‌ನಲ್ಲಿ ನಿರ್ಧಾರವಾಯಿತು. ಕೊನೆಯ ಓವರ್‌ನ ನಾಲ್ಕು ಎಸೆತಗಳಲ್ಲಿ ತಂಡದ ಗೆಲುವಿಗೆ ಮೂರು ರನ್‌ಗಳು ಬೇಕಿದ್ದವು. ಆಗ ರಿಚಾ ಘೋಷ್ ಗಳಿಸಿದ ವಿಜಯ ಬೌಂಡರಿಯೊಂದಿಗೆ ಆರ್‌ಸಿಬಿ ಸಂಭ್ರಮ ಗರಿಗೆದರಿತು. ಡೆಲ್ಲಿ ತಂಡವು ಸತತ ಎರಡನೇ ವರ್ಷವೂ ರನ್ನರ್ಸ್ ಅಪ್ ಆಯಿತು.

ಇನ್ನು ಪ್ರಶಸ್ತಿ ಗೆದ್ದ ಆರ್‌ಸಿಬಿ ತಂಡಕ್ಕೆ ₹6 ಕೋಟಿ ಬಹುಮಾನ, ರನ್ನರ್ಸ್‌ ಅಪ್‌ ಡೆಲ್ಲಿ ಕ್ಯಾಪಿಟಲ್ಸ್‌ಗೆ ₹3 ಕೋಟಿ ಬಹುಮಾನ. ಶ್ರೇಯಾಂಕ ಪಾಟೀಲಗೆ ಪರ್ಪಲ್‌ ಕ್ಯಾಪ್‌, ಎಲಿಸ್‌ ಪೆರಿಗೆ ಆರೇಂಜ್‌ ಕ್ಯಾಪ್‌ ಸಿಕ್ಕಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು