News Karnataka Kannada
Thursday, May 09 2024
ಕ್ರೀಡೆ

ಐಪಿಎಲ್ 2024: ವರ್ಷದ ಕ್ರೀಡಾ ಫ್ರಾಂಚೈಸ್ ಪ್ರಶಸ್ತಿ ಬಾಚಿಕೊಂಡ ಆರ್‌ ಸಿ ಬಿ

ಇಂಡಿಯನ್ ಪ್ರೀಮಿಯರ್ ಲೀಗ್​​​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ರಶಸ್ತಿ ಗೆಲ್ಲುವ ಕನಸು ಕನಸಾಗಿಯೇ ಉಳಿದಿದೆ. ಕಳೆದ 16 ಸೀಸನ್​ಗಳಿಂದ ಆರ್​ಸಿಬಿ ಚೊಚ್ಚಲ ಬಾರಿ ಕಿರೀಟ ಮುಡಿಗೇರಿಸಿಕೊಳ್ಳುವ ಪ್ರಯತ್ನದಲ್ಲಿದೆ. ಈ ಪ್ರಯತ್ನದ ಫಲವಾಗಿ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ವರ್ಷದ ಅತ್ಯುತ್ತಮ ಕ್ರೀಡಾ ಫ್ರಾಂಚೈಸ್ ಪ್ರಶಸ್ತಿ ದೊರಕಿದೆ.
Photo Credit : News Kannada

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್​​​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ರಶಸ್ತಿ ಗೆಲ್ಲುವ ಕನಸು ಕನಸಾಗಿಯೇ ಉಳಿದಿದೆ. ಕಳೆದ 16 ಸೀಸನ್​ಗಳಿಂದ ಆರ್​ಸಿಬಿ ಚೊಚ್ಚಲ ಬಾರಿ ಕಿರೀಟ ಮುಡಿಗೇರಿಸಿಕೊಳ್ಳುವ ಪ್ರಯತ್ನದಲ್ಲಿದೆ. ಈ ಪ್ರಯತ್ನದ ಫಲವಾಗಿ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ವರ್ಷದ ಅತ್ಯುತ್ತಮ ಕ್ರೀಡಾ ಫ್ರಾಂಚೈಸ್ ಪ್ರಶಸ್ತಿ ದೊರಕಿದೆ.

ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (KIIT) – CII ಸ್ಪೋರ್ಟ್ಸ್ ಬಿಸಿನೆಸ್ ಅವಾರ್ಡ್ಸ್ 2023 ರ ಮೊದಲ ಆವೃತ್ತಿಯಲ್ಲಿ ಆರ್​ಸಿಬಿಗೆ ಅತ್ಯುತ್ತಮ ಕ್ರೀಡಾ ಫ್ರಾಂಚೈಸ್ ಪ್ರಶಸ್ತಿ ನೀಡಲಾಗಿದೆ. ಈ ಮೂಲಕ ಆರ್​ಸಿಬಿ ದೇಶೀಯ ಅಂಗಳದ ಅತ್ಯುತ್ತಮ ಫ್ರಾಂಚೈಸ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇನ್ನು ಈ ಬಾರಿ ಆರ್‌ ಸಿ ಬಿ ಮ್ಯಾನೇಜ್ಮೆಂಟ್​ನಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಮುಖ್ಯ ಕೋಚ್ ಆಗಿ ಸಂಜಯ್ ಬಂಗಾರ್ ಬದಲಿಗೆ ಆ್ಯಂಡಿ ಫ್ಲವರ್​ ಅವರನ್ನು ಕರೆತರಲಾಗಿದೆ. ಹಾಗೆಯೇ ತಂಡದ ಡೈರೆಕ್ಟರ್ ಆಗಿ ಮೈಕ್ ಹಸ್ಸನ್ ಸ್ಥಾನದಲ್ಲಿ ಮೊ ಬೊಬಟ್ ಅವರನ್ನು ನೇಮಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು