ಜೈಪುರ: ಇಂದು ಜೈಪುರ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 4ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಜಸ್ತಾನ್ ರಾಯಲ್ಸ್ ತಂಡ ಗೆದ್ದು ಬೀಗಿದೆ.
ಟಾಸ್ ಗೆದ್ದು ಫಸ್ಟ್ ಬ್ಯಾಟಿಂಗ್ ಮಾಡಿದ ರಾಜಸ್ತಾನ್ ರಾಯಲ್ಸ್ ತಂಡದ ಪರ ಓಪನರ್ ಆಗಿ ಬಂದ ಜೋಸ್ ಬಟ್ಲರ್ ಕೇವಲ 11, ಯಶಸ್ವಿ ಜೈಸ್ವಾಲ್ 24 ರನ್ ಗಳಿಸಿ ಔಟಾದ್ರು. ಬಳಿಕ ಕ್ರೀಸ್ಗೆ ಬಂದ ಸಂಜು ಸ್ಯಾಮ್ಸನ್ ಕೊನೆವರೆಗೂ ಕ್ರೀಸ್ನಲ್ಲೇ ಇದ್ದು ಲಕ್ನೋ ಬೌಲರ್ಗಳ ಬೆಂಡೆತ್ತಿದ್ರು.
ರಾಜಸ್ತಾನ್ 4 ವಿಕೆಟ್ ನಷ್ಟಕ್ಕೆ ನಿಗದಿತ 20 ಓವರ್ಗಳಲ್ಲಿ 193 ರನ್ ಗಳಿಸಿದೆ. ಈ ಮೂಲಕ ಲಕ್ನೋ ತಂಡಕ್ಕೆ 194 ರನ್ ಬಿಗ್ ಟಾರ್ಗೆಟ್ ನೀಡಿತ್ತು.
ರಾಜಸ್ತಾನ್ ನೀಡಿದ 194 ರನ್ಗಳ ಗುರಿ ಬೆನ್ನತ್ತಿದ ಲಕ್ನೋ ಪರ ಕೆ.ಎಲ್ ರಾಹುಲ್ 2 ಸಿಕ್ಸರ್, 4 ಫೋರ್ ಸಮೇತ 58 ರನ್ ನೀಡಿದರು. ನಿಕೋಲಸ್ ಪೂರನ್ 4 ಸಿಕ್ಸರ್, 4 ಫೋರ್ ಸಮೇತ 64 ರನ್ ಬಾರಿಸಿದ್ರು. ದೀಪಕ್ ಹೂಡಾ 26 ರನ್ ಪೇರಿಸಿದರು ತಂಡ ಸೋತಿತು.