ಮುಂಬೈ: ಕೇಂದ್ರ ಸರ್ಕಾರವು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡಿದ್ದ ಘಟನೆಗಳನ್ನು ಆಧರಿಸಿದ ‘ಆರ್ಟಿಕಲ್ 370’ ಸಿನಿಮಾ ಕೆಲವೇ ದಿನಗಳ ಹಿಂದೆ ಬಿಡುಗಡೆ ಆಯಿತು.
ಚಿತ್ರಮಂದಿರದಲ್ಲಿ ಈ ಸಿನಿಮಾಗೆ ಒಳ್ಳೆಯ ಕಲೆಕ್ಷನ್ ಆಗಿದೆ. ಒಟಿಟಿಯಲ್ಲಿ ‘ಆರ್ಟಿಕಲ್ 370’ ನೋಡಬೇಕು ಎಂದು ಅನೇಕರು ಕಾದಿದ್ದಾರೆ. ಒಟಿಟಿ ರಿಲೀಸ್ ದಿನಾಂಕದ ಸಂಭವನೀಯ ದಿನಾಂಕದ ಬಗ್ಗೆ ಸುದ್ದಿ ಹಬ್ಬಿದೆ.
ಆರಂಭದಲ್ಲೇ ‘ಆರ್ಟಿಕಲ್ 370’ ಸಿನಿಮಾಗೆ ಸಾಧಾರಣ ಕಲೆಕ್ಷನ್ ಆಯಿತು. ನಂತರದ ದಿನಗಳಲ್ಲಿ ಅದೇ ಸ್ಥಿತಿ ಮುಂದುವರಿಯಿತು. ಅಚ್ಚರಿ ಏನೆಂದರೆ, ಸತತ ಒಂದು ತಿಂಗಳ ಪ್ರದರ್ಶನದ ಬಳಿಕ ಭಾರತದ ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾದ ಒಟ್ಟು ಕಲೆಕ್ಷನ್ 78.33 ಕೋಟಿ ರೂಪಾಯಿ ಆಗಿದೆ.
ವರದಿಗಳ ಪ್ರಕಾರ, ಏಪ್ರಿಲ್ 19ರಂದು ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ‘ಜಿಯೋ ಸಿನಿಮಾ’ ಮೂಲಕ ವೀಕ್ಷಣೆಗೆ ಲಭ್ಯವಾಗಲಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಈ ಸಿನಿಮಾದಲ್ಲಿ ಯಾಮಿ ಗೌತಮ್ ಅವರ ಜೊತೆ ಪ್ರಿಯಾಮಣಿ ಕೂಡ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ನರೇಂದ್ರ ಮೋದಿ ಪಾತ್ರವನ್ನು ಹಿರಿಯ ನಟ ಅರುಣ್ ಗೋವಿಲ್ ಅವರು ನಿಭಾಯಿಸಿದ್ದಾರೆ.