ಪುಣೆ, ನ.9: ಇಲ್ಲಿನ ಶ್ರೀ ಶಿವಚತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಎದುರಾಳಿ ತಂಡ ಹರಿಯಾಣ ಸ್ಟೀಲರ್ಸ್ ಅನ್ನು 36-33 ಅಂಕಗಳಿಂದ ಮಣಿಸಿದ ಬೆಂಗಳೂರು ಬುಲ್ಸ್ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಮೊದಲಾರ್ಧದಲ್ಲೇ ಹರ್ಯಾಣವನ್ನು 2 ಬಾರಿ ಆಲೌಟ್ ಮಾಡಿದ ಬುಲ್ಸ್, 20 ನಿಮಿಷಗಳ ಆಟದ ಬಳಿಕ 27-11ರ ಮುನ್ನಡೆ ಪಡೆಯಿತು. ದ್ವಿತೀಯಾರ್ಧದಲ್ಲಿ ಸ್ವಲ್ಪ ಮಂಕಾದ ಬುಲ್ಸ್ ಕೊನೆ 2 ನಿಮಿಷ ಬಾಕಿ ಇದ್ದಾಗ ಆಲೌಟ್ ಆಗಿ ಆತಂಕಕ್ಕೀಡಾಯಿತು. ಆದರೆ ಒತ್ತಡಕ್ಕೆ ಮಣಿಯದೆ ಗೆಲುವನ್ನು ತನ್ನದಾಗಿಸಿಕೊಂಡಿತು.
ರೈಡಿಂಗ್ನಲ್ಲಿ ನೀರಜ್ 9, ಟ್ಯಾಕಲ್ನಲ್ಲಿ ಮಹೇಂದ್ರ ಸಿಂಗ್ 5 ಅಂಕ ಗಳಿಸಿದರು.