News Karnataka Kannada
Monday, April 29 2024
ಕ್ರೀಡೆ

ಡಿಸೆಂಬರ್ 2 ರಿಂದ ಪ್ರೋ ಕಬಡ್ಡಿ ಲೀಗ್ ಆರಂಭ

ಬಹುನಿರೀಕ್ಷಿತ "ಪ್ರೋ ಕಬಡ್ಡಿ ಲೀಗ್" ಮತ್ತೇ ಎಂಟ್ರೀ ಕೊಟ್ಟಿದೆ. ಹೌದು. . . 10ನೇ ಆವೃತ್ತಿಯ ಬಹುನಿರೀಕ್ಷಿತ ಪ್ರೋ ಕಬಡ್ಡಿ ಲೀಗ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಡಿಸೆಂಬರ್ 2 ರಂದು ಈ ಟೂರ್ನಿಗೆ ಚಾಲನೆ ಸಿಗಲಿದೆ.
Photo Credit : News Kannada

ಮುಂಬೈ: ಬಹುನಿರೀಕ್ಷಿತ “ಪ್ರೋ ಕಬಡ್ಡಿ ಲೀಗ್” ಮತ್ತೇ ಎಂಟ್ರೀ ಕೊಟ್ಟಿದೆ. ಹೌದು. . . 10ನೇ ಆವೃತ್ತಿಯ ಬಹುನಿರೀಕ್ಷಿತ ಪ್ರೋ ಕಬಡ್ಡಿ ಲೀಗ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಡಿಸೆಂಬರ್ 2 ರಂದು ಈ ಟೂರ್ನಿಗೆ ಚಾಲನೆ ಸಿಗಲಿದೆ.

ಭಾರತದಲ್ಲಿ, 2014 ರಲ್ಲಿ ಪ್ರಾರಂಭವಾದ ಪ್ರೋ ಕಬಡ್ಡಿ ಲೀಗ್, ಇಂಡಿಯನ್ ಪ್ರೀಮಿಯರ್ ಲೀಗ್ ನಂತರ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಎರಡನೇ ಕ್ರೀಡಾ ಲೀಗ್ ಆಗಿದೆ. 2006 ರಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಕಬಡ್ಡಿ ಪಂದ್ಯಾವಳಿಯ ಜನಪ್ರಿಯತೆಯಿಂದ ಪ್ರಭಾವಿತಗೊಂಡು ಪ್ರೋ ಕಬಡ್ಡಿ ಲೀಗ್ ಆರಂಭವಾಯಿತು.

ಶನಿವಾರ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಸೆಣಸಲಿವೆ.

ಇನ್ನು ಪ್ರೋ ಕಬಡ್ಡಿ ಲೀಗ್ 2023 ಶನಿವಾರ (ಡಿ 02) ಆರಂಭವಾಗಲಿದೆ. ಟೂರ್ನಿಯು ಎರಡು ತಿಂಗಳ ಕಾಲ ಮುಂದುವರಿಯಲಿದ್ದು ಫೆ. 21ಕ್ಕೆ ಮುಕ್ತಾಯಗೊಳ್ಳಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಟಿವಿ ಚಾನೆಲ್‌ಗಳು ಪ್ರೋ ಕಬಡ್ಡಿ ಲೀಗ್‌ನ ಹತ್ತನೇ ಆವೃತ್ತಿಯನ್ನು ಭಾರತದಲ್ಲಿ ನೇರ ಪ್ರಸಾರ ಮಾಡುವ ಹಕ್ಕನ್ನು ಹೊಂದಿವೆ.

ಈ ಬಾರಿಯ ಪ್ರೋ ಕಬಡ್ಡಿ ಲೀಗ್ 2023 ತಂಡಗಳು ಹೀಗಿವೆ: ಬೆಂಗಾಲ್ ವಾರಿಯರ್ಸ್., ಬೆಂಗಳೂರು ಬುಲ್ಸ್., ದಬಾಂಗ್ ದೆಹಲಿ KC., ಗುಜರಾತ್ ಜೈಂಟ್ಸ್.,ಹರಿಯಾಣ ಸ್ಟೀಲರ್ಸ್., ಜೈಪುರ ಪಿಂಕ್ ಪ್ಯಾಂಥರ್ಸ್., ಪಾಟ್ನಾ ಪೈರೇಟ್ಸ್., ಪುಣೇರಿ ಪಲ್ಟನ್., ತಮಿಳು ತಲೈವಾಸ್.,ತೆಲುಗು ಟೈಟಾನ್ಸ್., ಯು ಮುಂಬಾ ಹಾಗು ಯುಪಿ ಯೋಧಾಸ್ .

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು