News Karnataka Kannada
Monday, April 29 2024
ಕ್ರೀಡೆ

ಪ್ರೊ ಕಬಡ್ಡಿ ಇತಿಹಾಸದಲ್ಲಿ ಮತ್ತೆ ಪವನ್ ರೆಕಾರ್ಡ್​: ಪಡೆ ಮೊತ್ತವೆಷ್ಟು ಗೊತ್ತೇ?

Pawan Sehrawat
Photo Credit : News Kannada

ನವದೆಹಲಿ: ಭಾರತದ ಕಬಡ್ಡಿ ನಾಯಕ ಪವನ್ ಸೆಹ್ರಾವತ್​ ಸೋಮವಾರ ನಡೆದ ಪ್ರೊ ಕಬಡ್ಡಿ ಲೀಗ್ ಹರಾಜಿನಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ತೆಲುಗು ಟೈಟಾನ್ಸ್ 2.60 ಕೋಟಿ ರೂ.ಗೆ ಖರೀದಿಸುವ ಮೂಲಕ ಭಾರತೀಯ ನಾಯಕ ತಮ್ಮದೇ ದಾಖಲೆಯನ್ನು ಮುರಿದರು.

ಇದಕ್ಕೂ ಮುನ್ನ ಹರಾಜಿನಲ್ಲಿ ಇರಾನ್​ನ ಮೊಹಮದ್ರೆಜಾ ಶಾಡ್ಲೂಯಿ ಅವರನ್ನು ಪುಣೇರಿ ಪಲ್ಟನ್ 2.35 ಕೋಟಿ ರೂ.ಗೆ ಖರೀದಿಸಿತ್ತು. ಪವನ್ ಅವರನ್ನು ತೆಲುಗು ಟೈಟಾನ್ಸ್ 2.6 ಕೋಟಿ ರೂ.ಗೆ ಖರೀದಿಸಿದರೆ, ಶಾದ್ಲೋಯಿ 2.35 ಕೋಟಿ ರೂ.ಗೆ ಪುಣೇರಿ ಪಲ್ಟನ್ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಕಳೆದ ವರ್ಷ ನಡೆದ ಹರಾಜಿನಲ್ಲಿ ಪವನ್ ಅವರನ್ನು ತಮಿಳ್ ತಲೈವಾಸ್ ತಂಡ 2.26 ಕೋಟಿ ರೂ.ಗೆ ಖರೀದಿಸಿತ್ತು. ಅದು ಈ ಹಿಂದಿನ ದಾಖಲೆಯಾಗಿತ್ತು.  ಇನ್ನು ಇಂದು ಸಹ (ಅ 10) ಹರಾಜು ಮುಂದುವರಿಯಲಿದ್ದು, ಹೆಚ್ಚಿನ ಆಟಗಾರರು ಹರಾಜಿಗೆ ಒಳಗಾಗಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 2.8 / 5. Vote count: 5

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು