News Karnataka Kannada
Monday, May 06 2024
ಕ್ರೀಡೆ

ಮದುವೆಗೂ ಮೊದಲೇ ಅಪ್ಪನಾದ ಹೈದರಾಬಾದ್ ತಂಡದ ನಾಯಕ ಕಮ್ಮಿನ್ಸ್

Married
Photo Credit : NewsKarnataka

ಆಸ್ಟ್ರೇಲಿಯಾ: ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಐಪಿಎಲ್​ನಲ್ಲಿ ಸಖತ್ ಪ್ರದರ್ಶನ ನೀಡ್ತಿದೆ. 7 ಪಂದ್ಯಗಳನ್ನು ಆಡಿರುವ ಹೈದರಾಬಾದ್​ ತಂಡವು ಐದರಲ್ಲಿ ಗೆದ್ದು ಪಾಯಿಂಟ್ಸ್​ ಟೇಬಲ್​​ನಲ್ಲಿ ಮೂರನೇ ಸ್ಥಾನದಲ್ಲಿದೆ.

ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕಮ್ಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವು ವಿಶ್ವಕಪ್ ಗೆದ್ದುಕೊಂಡಿತ್ತು. ಆಸ್ಟ್ರೇಲಿಯಾಗೆ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ, ಹೈದರಾಬಾದ್ ತಂಡವನ್ನೂ ಅದ್ಭುತವಾಗಿ ಮುನ್ನಡೆಸಿಕೊಂಡು ಹೋಗ್ತಿದ್ದಾರೆ.

ಕ್ಯಾಪ್ಟನ್ಸಿ ಮತ್ತು ಬೌಲಿಂಗ್ ಮೂಲಕ ಕ್ರಿಕೆಟ್ ಪ್ರೇಮಿಗಳ ಮನಸ್ಸು ಗೆದ್ದಿರುವ ಕಮ್ಮಿನ್ಸ್​, ನಿಜ ಜೀವನದಲ್ಲಿ ಸಂಗಾತಿಯ ಮನಸ್ಸು ಕದ್ದಿರುವ ವಿಚಾರ ನೀವೂ ತಿಳಿದುಕೊಳ್ಳ ಬೇಕು. ಕಮ್ಮಿನ್ಸ್ ಪತ್ನಿಯ ಹೆಸರು ಬೆಕಿ ಬೋಸ್ಟನ್.

ಕಮ್ಮಿನ್ಸ್ ಹಾಗೂ ಬೆಕಿ 2022ರಲ್ಲಿ ಎಂಗೇಜ್ ಆಗಿದ್ದಾರೆ. ಕಮ್ಮಿನ್ಸ್​ಗಿಂತ ಸುಮಾರು ಎರಡೂವರೆ ವರ್ಷ ಹಿರಿಯರು ಬೆಕಿ. ಪಿಕ್ನಿಕ್ ಸ್ಪಾಟ್​​ ಒಂದರಲ್ಲಿ ಸಿನಿಮಾ ಸ್ಟೈಲ್​​ನಲ್ಲಿ ಕಮ್ಮಿನ್ಸ್​ ತಾವು ಪ್ರೀತಿಸುತ್ತಿದ್ದ ಹುಡುಗಿಗೆ ಪ್ರಪೋಸ್ ಮಾಡಿದ್ದರಂತೆ.

ಇನ್ನು ಇಬ್ಬರು ಮದುವೆಯಾಗಲು ಬಯಸಿದ್ದರು. ಆದರೆ ಕೋವಿಡ್‌ ನಿಂದಾಗಿ ಮದುವೆ ವಿಳಂಬವಾಯಿತು. ಇದೇ ಸಮಯದಲ್ಲಿ ಅವರು ಮದುವೆಗೂ ಮೊದಲೇ ಪೋಷಕರಾದರು. ಇವರಿಬ್ಬರಿಗೆ ಮುದ್ದಾದ ಮಗನಿದ್ದಾನೆ. ಬೆಕಿ ಅವರು ವೃತ್ತಿಯಲ್ಲಿ ಇಂಟೀರಿಯರ್ ಡಿಸೈನರ್ ಆಗಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು