ಹೈದರಾಬಾದ್: ಭಾರತದ ಆತಿಥ್ಯದಲ್ಲಿ ಇದೇ ಅ.5 ರಿಂದ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯನ್ನಾಡಲು ಪಾಕ್ ಕ್ರಿಕೆಟ್ ತಂಡ ಬುಧವಾರ ತಡರಾತ್ರಿ ಹೈದರಾಬಾದ್ಗೆ ಬಂದಿಳಿದಿದೆ. ಈ ವೇಳೆ ಪಾಕ್ ತಂಡದ ಆಟಗಾರರಿಗೆ ವಿವಿಧ ರೀತಿಯ ಶಾಲುಗಳನ್ನ ಹೊದಿಸಿ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಗಿದೆ.
ಈ ನಡುವೆ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಆಜಂ ಸೇರಿದಂತೆ ಕೆಲವು ಆಟಗಾರರಿಗೆ ಕೇಸರಿ ಶಾಲು ಹಾಕಿ ಸ್ವಾಗತಿಸಿದ್ದು, ಇದೀಗ ಟ್ವಿಟರ್ನಲ್ಲಿ ಸಖತ್ ಟ್ರೆಂಡ್ ಆಗಿದೆ. ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದ ಪಾಕಿಸ್ತಾನ ತಂಡದ ಆಟಗಾರರಿಗೆ ಕೇಸರಿ ಸಾಲು ಹಾಕಿ ಭವ್ಯ ಸ್ವಾಗತ ಕೋರಿ ಬರಮಾಡಿಕೊಳ್ಳಲಾಯಿತು.
ಪಾಕ್ ಆಟಗಾರರು ಕೇಸರಿ ಶಾಲು ಧರಿಸಿದ ಫೋಟೊ ಮತ್ತು ವೀಡಿಯೋ ಇದೀಗ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಪಾಕ್ ತಂಡದ ನಾಯಕ ಬಾಬರ್ ಆಜಂ ಅವರನ್ನ ನೆಟ್ಟಿಗರು ತೆಲಂಗಾಣದ ಬಿಜೆಪಿ ಯುವ ಘಟಕದ ನಾಯಕ ಎಂದು ಟ್ರೋಲ್ ಮಾಡಿದ್ದಾರೆ.
Welcome to India, Babar Azam and Team Pakistan.#BabarAzam𓃵 #PakistanCricketTeam pic.twitter.com/GCsuSjgobI
— Aarz-e-ishq (@Aarzaai_Ishq) September 28, 2023