ಸಿಡ್ನಿ: ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ವೇಳೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆಸ್ಟ್ರೇಲಿಯಾದಲ್ಲಿ ಬಂಧನಕ್ಕೊಳಗಾಗಿ ಜಾಮೀನು ಪಡೆದಿದ್ದ ಶ್ರೀಲಂಕಾ ಕ್ರಿಕೆಟಿಗ ದನುಷ್ಕಾ ಗುಣತಿಲಕಾಗೆ ಸಿಡ್ನಿ ನ್ಯಾಯಾಲಯವು ರಿಲೀಪ್ ನೀಡಿದೆ ಎಂದು ವರದಿಯಾಗಿದೆ.
ಮೂಲವೊಂದರ ಪ್ರಕಾರ, ಸಿಡ್ನಿ ನ್ಯಾಯಾಲಯವು ಗುರುವಾರ ಗುಣತಿಲ ಅವರನ್ನು ಲೈಂಗಿಕ ದೌರ್ಜನ್ಯ ಆರೋಪದಿಂದ ಖುಲಾಸೆಗೊಳಿಸಿದೆ ಎಂದು ವರದಿ ಮಾಡಿದೆ. ಮಹಿಳೆಯೊಬ್ಬರ ಮೇಲೆ ಲೈಂಗಿ ದೌರ್ಜನ್ಯ ನಡೆಸಿದ ಪ್ರಕರಣದಲ್ಲಿ ಲಂಕಾದ ಕ್ರಿಕೆಟ್ ಆಟಗಾರ ದನುಷ್ಕಾ ಗುಣತಿಲಕ ಅವರನ್ನು ಸಿಡ್ನಿ ಪೊಲೀಸರು ಟೀಂ ಹೋಟೆಲ್ನಲ್ಲಿ ಬಂಧಿಸಿದ್ದರು.
ಈಗಿನ ಮಾಹಿತಿ ಪ್ರಕಾರ ಡೌನಿಂಗ್ ಸೆಂಟರ್ ಜಿಲ್ಲಾ ನ್ಯಾಯಾಲಯದಲ್ಲಿ ನ್ಯಾಯಾಧೀಶೆ ಸಾರಾ ಹುಗೆಟ್ ಅವರ ಮುಂದೆ ನಾಲ್ಕು ದಿನಗಳ ಸುದೀರ್ಘ ವಿಚಾರಣೆಯನ್ನು ಎದುರಿಸಿದ ಗುಣತಿಲಕ ಅವರು ಈ ಪ್ರಕರಣದಲ್ಲಿ ನಿರಪರಾಧಿ ಎಂದು ಸಾಬೀತಾಗಿರುವುದಾಗಿ ವರದಿಯಾಗಿದೆ.
Sri Lankan cricketer Danushka Gunathilaka has been found NOT guilty of sexual intercourse without consent following an accusation of "stealthing" involving a Tinder date in Sydney. – https://t.co/qx5NnSrSKL. #Australia #LKA #SriLanka #DanushkaGunathilaka pic.twitter.com/L5mmSOHCHQ
— Sri Lanka Tweet 🇱🇰 (@SriLankaTweet) September 28, 2023