News Karnataka Kannada
Saturday, May 04 2024
ಕ್ರೀಡೆ

ಭಾರತ ಚೊಚ್ಚಲ ಟಿ20 ವಿಶ್ವಕಪ್ ಗೆದ್ದು ಇಂದಿಗೆ 16 ವರ್ಷದ ಸಂಭ್ರಮ

Team India೨೦೦೭
Photo Credit : News Kannada

ದೆಹಲಿ: ಎಂಎಸ್ ಧೋನಿ ನೇತೃತ್ವದ ಟೀಂ ಇಂಡಿಯಾ ಚೊಚ್ಚಲ ಟಿ20 ವಿಶ್ವಕಪ್ ಗೆದ್ದು ಇಂದಿಗೆ ಭರ್ತಿ 16 ವರ್ಷಗಳಾಗಿವೆ. 2007 ರಲ್ಲಿ ನಡೆದ ಟಿ20 ವಿಶ್ವಕಪ್‌ನ ಉದ್ಘಾಟನಾ ಆವೃತ್ತಿಯನ್ನು ಗೆಲ್ಲುವ ಮೂಲಕ ಭಾರತ ವಿಶ್ವ ಕ್ರಿಕೆಟ್​ನಲ್ಲಿ ಇತಿಹಾಸ ಸೃಷ್ಟಿಸಿತ್ತು.

ಜೋಹಾನ್ಸ್‌ಬರ್ಗ್‌ನ ನ್ಯೂ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಯುವ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. 16 ವರ್ಷಗಳ ಈ ಸ್ಮರಣೀಯ ಗೆಲುವನ್ನು ಈಗ ನೆನೆದಿರುವ ಬಿಸಿಸಿಐ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಂದಿನ ವಿಶ್ವಕಪ್ ಗೆಲುವಿನ ಹೀರೋಗಳಿಗೆ ಅಭಿನಂದನೆ ಸಲ್ಲಿಸಿದೆ.

ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಗೌತಮ್ ಗಂಭೀರ್ ಅವರ 75 ರನ್ ಮತ್ತು ರೋಹಿತ್ ಶರ್ಮಾ ಅವರ 30 ರನ್​​ಗಳ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 157 ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಮಿಸ್ಬಾ ಉಲ್ ಹಕ್ 38 ಎಸೆತಗಳಲ್ಲಿ 43 ರನ್ ಬಾರಿಸಿದ ಹೊರತಾಗಿಯೂ ಪಾಕಿಸ್ತಾನ 19.3 ಓವರ್ ಗಳಲ್ಲಿ 152 ರನ್ ಗಳಿಗೆ ಆಲೌಟ್ ಆಯಿತು.

ಧೋನಿ ನಾಯಕತ್ವದಲ್ಲಿ ಮೊದಲ ಬಾರಿಗೆ ಪಂದ್ಯಾವಳಿಯನ್ನು ಆಡಿದ ಭಾರತ, ತನ್ನ ಮೊದಲ ಪ್ರಯತ್ನದಲ್ಲಿಯೇ ಮ್ಯಾಜಿಕ್ ಮಾಡಿತು. ಇದಾದ ಬಳಿಕ ಭಾರತಕ್ಕೆ ಇದುವರೆಗೂ ಟಿ20 ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಧೋನಿ ನಾಯಕತ್ವದಲ್ಲಿ ಭಾರತ 2014 ರಲ್ಲಿ ಟಿ 20 ವಿಶ್ವಕಪ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿತು ಆದರೆ ಶ್ರೀಲಂಕಾ ವಿರುದ್ಧ ಸೋತಿತ್ತು.

ಇಲ್ಲಿ ಗಮನಿಸಬೇಕಾಗಿದ್ದ ಅಂಶವೆಂದರೇ, ಈ ಪಂದ್ಯದಲ್ಲಿ ಪಾಕ್‌ ಗೆಲ್ಲಲು 13 ರನ್ಗಳ ಅಗತ್ಯವಿತ್ತು. ಆದರೆ ಇತ್ತ ಭಾರತ ಗೆಲ್ಲಲು ಒಂದೇ ಒಂದು ವಿಕೆಟ್‌ ಬೇಕಿತ್ತು ಹಾಗಾಗಿ ಧೋನಿ ಕೋನೆಯ ಓವರ್‌ ನಲ್ಲಿ ಜೋಗಿಂದರ್‌ ಗೆ ಬೌಲಿಂಗ್‌ ಮಾಡುವ ಅವಕಾಶ ನೀಡಿ ವಿಕೆಟ್‌ ಕಿತ್ತು ಪಾಕ್‌ ಅನ್ನು ಮಕಾಡೆ ಮಲಗಿಸಿ ಭಾರತ ಗೆದ್ದು ಬೀಗಿತ್ತು.

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು