ಕ್ಯಾಂಡಿ : ಭಾರತೀಯ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿಯ ಹೆಸರನ್ನು ಅಭಿಮಾನಿಗಳು ಜೋರಾಗಿ ಕೂಗಿದ್ದಕ್ಕೆ, ಭಾರತದ ಮಾಜಿ ಕ್ರಿಕೆಟಿಗ, ಏಶ್ಯಾಕಪ್ ಪ್ರಸಾರ ಮಾಧ್ಯಮ ತಂಡದಲ್ಲಿರುವ ಗೌತಮ್ ಗಂಭೀರ್ ಮಧ್ಯ ಬೆರಳು ತೋರಿಸಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.
ಅವರ ನಡೆ, ಕ್ರೀಡಾ ಮನೋಭಾವವನ್ನು ನೆಟ್ಟಿಗರು ಟೀಕಿಸಿದ ನಂತರ ಪ್ರತಿಕ್ರಿಯಿಸಿದ ಗೌತಮ್ ಗಂಭೀರ್, ಗುಂಪಿನಲ್ಲಿದ್ದ ಕೆಲವು ಪಾಕಿಸ್ತಾನದ ಅಭಿಮಾನಿಗಳು ಭಾರತ ವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದರು. ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದರು. ಅದಕ್ಕಾಗಿಯೇ ನಾನು ಈ ರೀತಿ ಪ್ರತಿಕ್ರಿಯಿಸಿದೆ ಎಂದು ಸಮರ್ಥಿಸಿಕೊಂಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
Presenting BJP MP Gautam Gambhir 👇 pic.twitter.com/Unv5cwBYqW
— Srinivas BV (@srinivasiyc) September 4, 2023