ನವದೆಹಲಿ: ಅ.5 ರಿಂದ ಪ್ರಾರಂಭವಾಗುವ ಐಸಿಸಿ ವಿಶ್ವಕಪ್’ಗೆ ಮುಂಚಿತವಾಗಿ ಭಾರತದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಬುಧವಾರ ಏಕದಿನ ಬೌಲರ್ಗಳ ಶ್ರೇಯಾಂಕದಲ್ಲಿ ಎಂಟು ಸ್ಥಾನ ಮೇಲಕ್ಕೇರಿ ನಂ.1 ಸ್ಥಾನವನ್ನ ಮರಳಿ ಪಡೆದಿದ್ದಾರೆ.
ಏಷ್ಯಾಕಪ್ ಫೈನಲ್ ನಲ್ಲಿ ಸಿರಾಜ್ ಅವರ ದಾಳಿಯು ಶ್ರೀಲಂಕಾವನ್ನು 50 ರನ್ ಗಳಿಗೆ ಕಟ್ಟಿಹಾಕಿತು ಮತ್ತು ಬೌಲಿಂಗ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಲು ಸಹಾಯ ಮಾಡಿತು.
ಏಷ್ಯಾಕಪ್ 21ಕ್ಕೆ 6 ವಿಕೆಟ್ ಪಡೆದ ಸಿರಾಜ್, ಈ ವರ್ಷದ ಮಾರ್ಚ್ ನಲ್ಲಿ ಜೋಶ್ ಹೇಜಲ್ವುಡ್ ವಿರುದ್ಧ ಸೋತಿದ್ದ ನಂ.1 ಸ್ಥಾನವನ್ನು ಮರಳಿ ಪಡೆದಿದ್ದಾರೆ.
Congratulations to @mdsirajofficial on becoming the No.1️⃣ ranked bowler in ICC Men's ODI Bowler Rankings 👍👍#TeamIndia#MirrorNowSummit#KanimozhiKarunanidhi#HavellsKeDeva#BrandedFeatures #Shubh #ICCWorldCup2023 #iccrankings #havellskedeva #MohammadSiraj pic.twitter.com/pgoxAbfnld
— Anurag Jareda (@Anurag_4M) September 20, 2023