ಮುಂಬೈ: ಇಂದು ದೇಶದೆಲ್ಲೆಡೆ ಜನ ಅದ್ಧೂರಿಯಾಗಿ ಕ್ರಿಸ್ಮಸ್ ಹಬ್ಬ ಆಚರಿಸುತ್ತಿದ್ದಾರೆ. ತಡರಾತ್ರಿಯಿಂದಲೇ ಚರ್ಚ್ಗಳಲ್ಲಿ ಸಾಮೂಹಿಕ ಪ್ರಾರ್ಥನೆ ಪ್ರಾರಂಭವಾಗಿದ್ದು ಜನರು ಅತ್ಯಂತ ಉತ್ಸಾಹದಿಂದ ಚರ್ಚ್ಗಳತ್ತ ತೆರಳಿ ಪ್ರಾರ್ಥನೆಯಲ್ಲಿ ಭಾಗವಹಿಸುತ್ತಿದ್ದಾರೆ.
ಚರ್ಚ್ ಮುಂಭಾಗದಲ್ಲಿ ಪಟಾಕಿ ಸಿಡಿಸಿ, ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರ ಮಾಡಿ, ಏಸು ಕ್ರಿಸ್ತನ ಆಕರ್ಷಕ ಪ್ರತಿಮೆಗಳನ್ನಿಡುವುದರ ಜೊತೆಗೆ ಚರ್ಚ್ಗಳನ್ನು ಮದುವಣಗಿತ್ತಿಯಂತೆ ಶೃಂಗರಿಸಿ ಹಬ್ಬಕ್ಕೆ ತಯಾರಿ ನಡೆಸಿದ್ದಾರೆ.
ಇನ್ನು ಕ್ರಿಸ್ಮಸ್ ಆಚರಣೆಯಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಕೂಡ ಹಿಂದೆ ಬಿದ್ದಿಲ್ಲ. ತಮ್ಮ ಅಭಿಮಾನಿಗಳಿಗೆ ಶುಭಾಯಶಯ ಕೋರಿದೆ. ಎಕ್ಸ್ನಲ್ಲಿ ಮೇರಿ ಕ್ರಿಸ್ಮಸ್ಗೆ ವಿಶ್ ಮಾಡಿದೆ. ವಿಶೇಷ ಏನಪ್ಪ ಅಂದರೆ ಆರ್ಸಿಬಿ ತಂಡದ ಪ್ರಮುಖ ಆಟಗಾರರನ್ನು ಸಾಂಟಾ ಕ್ಲಾಸ್ ಹುಡುಗರಂತೆ ರೆಡಿ ಮಾಡಿ ಪೋಸ್ಟ್ ಮಾಡಲಾಗಿದೆ.
𝕁𝕚𝕟𝕘𝕝𝕖 𝕒𝕝𝕝 𝕥𝕙𝕖 𝕨𝕒𝕪: ℝℂ𝔹 𝔼𝕕𝕚𝕥𝕚𝕠𝕟 🎄🔔
Wishing everyone a #MerryChristmas! 🧑🎄🤶#PlayBold #ನಮ್ಮRCB #Christmas pic.twitter.com/aMcfPHD7na
— Royal Challengers Bengaluru (@RCBTweets) December 25, 2023