ಕೌಲಾಲಂಪುರ: ಮಲೇಷ್ಯಾ ಮಾಸ್ಟರ್ಸ್‌ ಸೂಪರ್‌-500 ಬ್ಯಾಡ್ಮಿಂಟನ್‌ ಪಂದ್ಯಾವಳಿ ಬುಧವಾರದಿಂದ ಆರಂಭವಾಗಲಿದ್ದು, ಭಾರತ ಪರ ಲಕ್ಷ್ಯ ಸೇನ್‌, ಕಿರಣ್‌ ಜಾರ್ಜ್‌, ಎಚ್‌.ಎಸ್‌. ಪ್ರಣಯ್‌ ಮತ್ತು ತರುಣ್‌ ಕಣಕ್ಕಿಳಿಯಲಿದ್ದಾರೆ. ವನಿತಾ ವಿಭಾಗದಲ್ಲಿ ತನ್ವಿ ಶರ್ಮ, ಅಶ್ಮಿತಾ ಚಲಿಹಾ ನಿರೀಕ್ಷೆ ಮೂಡಿಸಿದ್ದಾರೆ.

ಮಂಗಳವಾರ ನಡೆದ ವನಿತಾ ಅರ್ಹತಾ ಸುತ್ತಿನಲ್ಲಿ ಚೈನೀಸ್‌ ತೈಪೆಯ ಪೈ ಯು-ಪೋ ವಿರುದ್ಧ 21-23 21-16 21-16 ಅಂತರದಲ್ಲಿ ಗೆದ್ದ ಅಶ್ಮಿತಾ ಚಲಿಹಾ ಮುಖ್ಯ ಸುತ್ತಿಗೆ ಪ್ರವೇಶ ಪಡೆದಿದ್ದಾರೆ. ಬುಧವಾರ ಇಂಡೋನೇಷ್ಯಾದ ತಲಿತಾ ರಾಮಧಾನಿ ವಿರುದ್ಧ ಆರಂಭಿಕ ಸುತ್ತಿನ ಪಂದ್ಯ ಆಡಲಿದ್ದಾರೆ.