ಲಕ್ನೋ: ಸಿಎಸ್‌ಕೆ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಲಕ್ನೋ ಸೂಪರ್ ಜೈಂಟ್ಸ್‌ಗೆ ಶಾಕ್ ಎದುರಾಗಿದೆ. ನಾಯಕ ರಿಷಭ್ ಪಂತ್‌ಗೆ ಬಿಸಿಸಿಐ 12 ಲಕ್ಷ ರೂ. ದಂಡ ವಿಧಿಸಿದೆ.

ಶುಕ್ರವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ನಿಧಾನಗತಿಯ ಓವರ್ ಕಾಯ್ದುಕೊಂಡಿದ್ದಕ್ಕಾಗಿ ಲಕ್ನೋ ಸೂಪರ್ ಜೈಂಟ್ಸ್ ನಾಯಕ ರಿಷಭ್ ಪಂತ್‌ಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ.

ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.22ರ ಅಡಿಯಲ್ಲಿ ಕನಿಷ್ಠ ಓವರ್ ರೇಟ್‌ಗೆ ಸಂಬಂಧಿಸಿದ್ದು, ಈ ಸೀಸನ್‌ನಲ್ಲಿ ರಿಷಭ್ ಪಂತ್ ಮೊದಲ ಬಾರಿ ನೀತಿ ಉಲ್ಲಂಘಿಸಿದ್ದಕ್ಕಾಗಿ 12 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.

ಐಪಿಎಲ್ ನಿಯಮಗಳ ಪ್ರಕಾರ, ಒಂದು ಸೀಸನ್‌ನಲ್ಲಿ ತಂಡವೊಂದು ಸತತ ಮೂರು ಬಾರಿ ನಿಧಾನಗತಿಯ ಓವರ್ ಕಾಯ್ದುಕೊಂಡರೆ ನಾಯಕನಿಗೆ ನಿಷೇಧ ಹೇರಲಾಗುತ್ತದೆ. ಮೊದಲ ಬಾರಿ ಉಲ್ಲಂಘಿಸಿದಾಗ 12 ಲಕ್ಷ ರೂ. ದಂಡ, ಎರಡನೇ ಬಾರಿ ಉಲ್ಲಂಘಿಸಿದಾಗ 24 ಲಕ್ಷ ದಂಡ ಹಾಗೂ ಮೂರನೇ ಬಾರಿ ಉಲ್ಲಂಘಿಸಿದಾಗ 30 ಲಕ್ಷ ದಂಡ ಹಾಗೂ ಒಂದು ಪಂದ್ಯದಿಂದ ಬ್ಯಾನ್ ಮಾಡಲಾಗುತ್ತದೆ. ಜೊತೆಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿದ್ದ ಉಳಿದ ಆಟಗಾರರಿಗೂ ಪಂದ್ಯದ ಶುಲ್ಕದ 50% ಅಥವಾ 12 ಲಕ್ಷ ರೂ. ದಂಡ ವಿಧಿಸಲಾಗುತ್ತದೆ.