ಮುಂಬೈ: ಬಾಲಿವುಡ್ ನಟ ರಣಬೀರ್ ಕಪೂರ್ ಅಯೋಧ್ಯೆಯಲ್ಲಿ ಕೋಟಿ ಮೌಲ್ಯದ ಭೂಮಿ ಖರೀದಿಸಿದ್ದಾರೆ. ರಾಮಾಯಣ ಸಿನಿಮಾದಲ್ಲಿ ಶ್ರೀರಾಮನ ಪಾತ್ರದಲ್ಲಿ ನಟಿಸುತ್ತಿರುವ ರಣಬೀರ್ ಕಪೂರ್, ಇದೀಗ ಅಯೋಧ್ಯೆಯಲ್ಲೇ ಭೂಮಿ ಖರೀದಿಸಿರುವುದು ವಿಶೇಷ ಗಮನ ಸೆಳೆದಿದೆ.

ಅಯೋಧ್ಯೆಯ ಸರಯೂ ನದಿಯ ದಡದಲ್ಲಿರುವ ದಿ ಸರಯೂ ಎಂಬ ಪ್ರೀಮಿಯಂ ಪ್ರಾಜೆಕ್ಟ್‌ನಲ್ಲಿ ರಣಬೀರ್ ಕಪೂರ್ ಸುಮಾರು 3.31 ಕೋಟಿ ರೂ. ಮೌಲ್ಯದ ಭೂಮಿಯನ್ನು ಖರೀದಿಸಿದ್ದಾರೆ ಎಂದು ರಿಯಲ್ ಎಸ್ಟೇಟ್ ಸಂಸ್ಥೆ ತಿಳಿಸಿದೆ. ಸುಮಾರು 2,134 ಚದರ ಅಡಿ ವಿಸ್ತೀರ್ಣದ ಈ ಜಾಗವು 75 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿರುವ ಐಷಾರಾಮಿ ಯೋಜನೆಯ ಭಾಗವಾಗಿದೆ.

ಈ ಪ್ರಾಜೆಕ್ಟ್‌ನಲ್ಲಿ ಕ್ಲಬ್‌ಹೌಸ್, ಲೈಫ್‌ಸ್ಟೈಲ್ ಸೌಲಭ್ಯಗಳು ಹಾಗೂ ‘ದಿ ಲೀಲಾ’ ನಿರ್ವಹಣೆಯ ಐಷಾರಾಮಿ ಹೋಟೆಲ್ ಕೂಡ ಇರಲಿದೆ ಎಂದು ಹೇಳಲಾಗಿದೆ. ಅಯೋಧ್ಯೆ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಹಿನ್ನೆಲೆ ರಣಬೀರ್ ಅವರ ಈ ಭೂಮಿ ಮೇಲಿನ ಹೂಡಿಕೆ ಎಲ್ಲರ ಗಮನ ಸೆಳೆದಿದೆ.