ಬೆಂಗಳೂರು: ಭಾರತೀಯ ಕ್ರಿಕೆಟ್ ನಲ್ಲಿ ರನ್ ಮಷಿನ್ ಎಂದು ಪ್ರಶ್ಯಾತರಾಗಿರುವ ವಿರಾಟ್ ಕೊಹ್ಲಿ ಮತ್ತು ಪ್ರಮುಖ ಆಲ್ ರೌಂಡರ್ ರವೀಂದ್ರ ಜಡೇಜರ ನಡುವೆ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ನೀಡುವ ʼವರ್ಷದ ಕ್ರಿಕೆಟಿಗʼ ಪ್ರಶಸ್ತಿಗಾಗಿ ಪೈಪೋಟಿ ನಡೆದಿದೆ.
ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ʼಟೆಸ್ಟ್ ಕ್ರಿಕೆಟಿಗʼ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.
ʼಸರ್ ಗ್ಯಾರಿಫೀಲ್ಡ್ ಸೋಬರ್ಸ್ ಟ್ರೋಫಿʼಯನ್ನು ಮೂರೂ ಮಾದರಿಯ ಕ್ರಿಕೆಟಿನಲ್ಲಿ ವರ್ಷದುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಕೊಡಲಾಗುತ್ತಿದ್ದು, ಇದಕ್ಕಾಗಿ ಕೊಹ್ಲಿ, ಜಡೇಜಾರ ನಡುವೆಯಷ್ಟೇ ಅಲ್ಲ, ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಮತ್ತು ಟ್ರಾವಿಸ್ ಹೆಡ್ ನಡುವೆ ಪೈಪೋಟಿ ಇದೆ.
ʼಟೆಸ್ಟ್ ಕ್ರಿಕೆಟಿಗʼ ಪ್ರಶಸ್ತಿಯ ರೇಸ್ ನಲ್ಲಿ ಅಶ್ವಿನ್, ಉಸ್ಮಾನ್ ಖ್ವಾಜಾ, ಟ್ರಾವಿಸ್ ಹೆಡ್, ಜೋ ರೂಟ್ ಕಂಡುಬರುತ್ತಾರೆ.