News Karnataka Kannada
Saturday, May 04 2024
ಕ್ರೀಡೆ

ವೈವಾಹಿಕ ಜೀವನಕ್ಕೆ ಕಾಲಿರಿಸಿದ ಟೀಂ ಇಂಡಿಯಾದ ಯುವ ವೇಗದ ಬೌಲರ್

ಟೀಂ ಇಂಡಿಯಾದ ಯುವ ವೇಗದ ಬೌಲರ್ ಮುಖೇಶ್ ಕುಮಾರ್ ತಮ್ಮ ಬಾಲ್ಯದ ಗೆಳತಿ ಬಿಹಾರದ ದಿವ್ಯಾ ಸಿಂಗ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ನಿನ್ನೆ ಅಂದರೆ ನವೆಂಬರ್ 28 ರ ಮಂಗಳವಾರದಂದು ಗೋರಖ್‌ಪುರದ ಹೋಟೆಲ್‌ನಲ್ಲಿ ಈ ಪ್ರಣಯ ಪಕ್ಷಿಗಳ ವಿವಾಹ ಅದ್ಧೂರಿಯಾಗಿ ನೆರವೇರಿತು.
Photo Credit : News Kannada

ಟೀಂ ಇಂಡಿಯಾದ ಯುವ ವೇಗದ ಬೌಲರ್ ಮುಖೇಶ್ ಕುಮಾರ್ ತಮ್ಮ ಬಾಲ್ಯದ ಗೆಳತಿ ಬಿಹಾರದ ದಿವ್ಯಾ ಸಿಂಗ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.  ನವೆಂಬರ್ 28 ರ ಮಂಗಳವಾರದಂದು ಗೋರಖ್‌ಪುರದ ಹೋಟೆಲ್‌ನಲ್ಲಿ ಈ ಪ್ರಣಯ ಪಕ್ಷಿಗಳ ವಿವಾಹ ಅದ್ಧೂರಿಯಾಗಿ ನೆರವೇರಿತು.

ಇದೀಗ ನವ ಜೋಡಿಗಳ ಮದುವೆಯ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಡಿಸೆಂಬರ್ 4 ರಂದು ಗೋರಖ್‌ಪುರದಲ್ಲಿ ಮುಖೇಶ್-ದಿವ್ಯಾ ವಿವಾಹ ಆರತಕ್ಷತೆ ನಡೆಯಲಿದೆ.

ವರ್ಷದ ಹಿಂದೆ ಟೀಂ ಇಂಡಿಯಾವನ್ನು ಸೇರಿಕೊಂಡ ಮುಖೇಶ್ ವರ್ಷದೊಳಗೆ ತಂಡದ ಪರವಾಗಿ ಎಲ್ಲಾ ಮೂರು ಸ್ವರೂಪಗಳಲ್ಲಿ ಪದಾರ್ಪಣೆ ಮಾಡಿರುವುದು ಗಮನಾರ್ಹ. ಈ ವರ್ಷದ ಜುಲೈನಲ್ಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಏಕದಿನ, ಟೆಸ್ಟ್ ಮತ್ತು ಟಿ20 ಸ್ವರೂಪಗಳಲ್ಲಿ ಭಾರತದ ಪರವಾಗಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಮುಖೇಶ್ ಪಾದಾರ್ಪಣೆ ಮಾಡಿದ್ದರು.

ಮುಖೇಶ್ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದು, 2022 ರ ಐಪಿಎಲ್ ಹರಾಜಿನಲ್ಲಿ ಮುಖೇಶ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ 5 ಕೋಟಿಗೆ ಖರೀದಿಸಿತು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು