News Karnataka Kannada
Wednesday, May 08 2024
ಕ್ರೀಡೆ

ಏಷ್ಯನ್ ಗೇಮ್ಸ್ 2023: ಸೆಮಿ ಫೈನಲ್ ಪ್ರವೇಶಿಸಿದ ಭಾರತ ಮಹಿಳಾ ತಂಡ

Team India Womens
Photo Credit : News Kannada

ಹ್ಯಾಂಗ್‌ಝೌ: ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್ 2023ರ ಸ್ಮೃತಿ ಮಂಧಾನ ನಾಯಕತ್ವದ ಭಾರತ ಹಾಗೂ ವಿನಿಫ್ರೆಡ್ ದುರೈಸಿಂಗಮ್ ನೇತೃತ್ವದ ಮಲೇಷ್ಯಾ ತಂಡಗಳ ನಡುವಣ ಕ್ವಾರ್ಟರ್ ಫೈನಲ್ ಕ್ರಿಕೆಟ್ ಪಂದ್ಯ ಮಳೆಯಿಂದಾಗಿ ರದ್ದಾಗಿದೆ.

ಟೀಮ್ ಇಂಡಿಯಾ ವನಿತೆಯರು ಬ್ಯಾಟಿಂಗ್ ನಡೆಸಿ ಬೃಹತ್ ಮೊತ್ತ ಕಲೆಹಾಕಿದರೂ, ಮಲೇಷ್ಯಾ ಟಾರ್ಗೆಟ್ ಬೆನ್ನಟ್ಟಲು ಮಳೆ ಬಿಡಲಿಲ್ಲ. ಹೀಗಾಗಿ ಅಂತಿಮವಾಗಿ ಪಂದ್ಯವನ್ನು ಮಳೆಯಿಂದ ರದ್ದು ಮಾಡಲಾಯಿತು. ಈ ಮೂಲಕ ಭಾರತ ಮಹಿಳಾ ತಂಡ ಏಷ್ಯನ್ ಗೇಮ್ಸ್​ನಲ್ಲಿ ಸೆಮಿ ಫೈನಲ್​ಗೆ ಪ್ರವೇಶಿಸಿದೆ.

ಭಾರತ ನಿಗದಿತ 15 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 173 ರನ್ ಕಲೆಹಾಕಿತು. ಟಾರ್ಗೆಟ್ ಬೆನ್ನಟ್ಟಲು ಬಂದ ಮಲೇಷ್ಯಾ ಕ್ರೀಸ್​ಗೆ ಇಳಿದಾಗ ಮಳೆ ಸುರಿಯಿತು. 2 ಎಸೆತ ಹಾಕಲಷ್ಟೆ ಸಾಧ್ಯವಾಯಿತು. ಕೆಲ ಸಮಯ ಕಾದರೂ ಮಳೆ ನಿಲ್ಲಲಿಲ್ಲ. ಹೀಗಾಗಿ ಭಾರತ – ಮಲೇಷ್ಯಾ ನಡುವಣ ಪಂದ್ಯ ಮಳೆಯಿಂದಾಗಿ ರದ್ದು ಮಾಡಲಾಯಿತು. ಭಾರತದ ಮಹಿಳಾ ತಂಡ ಉತ್ತಮ ಪಾಯಿಂಟ್ ಹೊಂದಿದ್ದ ಆಧಾರದ ಮೇಲೆ ಮಂಧಾನ ನೇತೃತ್ವದ ಭಾರತ ತಂಡ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು