News Karnataka Kannada
Thursday, May 02 2024
ಕ್ರೀಡೆ

ಸ್ಕ್ವಾಷ್‌ನಲ್ಲಿ ಭಾರತ ಜಯಭೇರಿ: ಪಾಕ್‌ ತಂಡ ವಿರುದ್ಧ ರೋಚಕ ಗೆಲುವು

India beat Pakistan by 7 wickets in squash
Photo Credit : Twitter

ಹ್ಯಾಂಗ್‌ಝೌ: ಏಷ್ಯನ್ ಗೇಮ್ಸ್‌ನ ಪುರುಷರ ಟೀಮ್ ಸ್ಕ್ವಾಷ್‌ನಲ್ಲಿ ಭಾರತವು ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಜಯಭೇರಿ ಬಾರಿಸಿ ಚಿನ್ನದ ಪದಕವನ್ನು ಗೆದ್ದುಕೊಂಡಿತು.

ಪಾಕಿಸ್ತಾನದ ನೂರ್ ಜಮಾನ್ ಅವರನ್ನು ಭಾರತದ ಅಭಯ್ ಸಿಂಗ್ ಸೀಸಾ ಡಿಸೈಡ್‌ನಲ್ಲಿ 3-2 ಅಂತರದಲ್ಲಿ ಮಣಿಸಿದರು. ಆ ಮೂಲಕ ಭಾರತ ಮತ್ತೊಮ್ಮೆ ಸ್ಕ್ವಾಷ್ ನಲ್ಲಿ ಚಿನ್ನದ ಪದಕ ಜಯಿಸಿದೆ. ಮತ್ತೋರ್ವ ಆಟಗಾರ ಮಹೇಶ್ ಮಂಗಾಂವ್ಕರ್ ಪಾಕಿಸ್ತಾನದ ಇಕ್ಬಾಲ್ ನಾಸಿರ್‌ಗೆ ಓಪನರ್‌ನಲ್ಲಿ ಒಂದೇ ಅಂತರದಿಂದ ಸೋತ ನಂತರ ಅನುಭವಿ ಸೌರವ್ ಘೋಸಲ್ ಅವರು ಮುಹಮ್ಮದ್ ಅಸಿಮ್ ಖಾನ್ ವಿರುದ್ಧ 3-0 ಗೆಲುವಿನೊಂದಿಗೆ ಭಾರತೀಯರನ್ನು ಮತ್ತೆ ಸ್ಪರ್ಧೆಗೆ ತಂದರು.

ಅಂತಿಮವಾಗಿ ಈ ರೋಚಕ ಹಣಾಹಣಿಯಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಮಣಿಸಿ ಪದಕ ಜಯಿಸಿದೆ. ಈ ಹಿಂದೆ ಇದೇ ಕ್ರೀಡಾಕೂಟದ ಲೀಗ್ ಹಂತದ ಪಂದ್ಯದಲ್ಲಿ ಭಾರತ ಇದೇ ಪಾಕಿಸ್ತಾನ ಜೋಡಿಯ ವಿರುದ್ದ ಸೋಲುಕಂಡಿತ್ತು. ಆದರೆ ಫೈನಲ್ ನಲ್ಲಿ ಇದೇ ಜೋಡಿಯನ್ನು ಮಣಿಸುವ ಮೂಲಕ ತನ್ನ ಸೋಲಿನ ಸೇಡು ತೀರಿಸಿಕೊಂಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು