News Karnataka Kannada
Tuesday, May 07 2024
ಕ್ರೀಡೆ

ವಿಶ್ವಕಪ್‌: ದಕ್ಷಿಣ ಆಫ್ರಿಕಾಗೆ ಸೋಲು, ಆಸ್ಟ್ರೇಲಿಯ ಫೈನಲ್‌ಗೆ

Icc Cricket World Cup 2019: South Africa lose, Australia enter final
Photo Credit : News Kannada

ಕೋಲ್ಕತಾ : ಇಲ್ಲಿನ ಈಡನ್ ಗಾರ್ಡನ್ಸ್ ನಲ್ಲಿ ಗುರುವಾರ ನಡೆದ ವಿಶ್ವಕಪ್ 2ನೇ ಸೆಮಿ ಫೈನಲ್ ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್‌ ಆಸ್ಟ್ರೇಲಿಯ ಅಮೋಘ ಜಯ ಸಾಧಿಸಿ ಫೈನಲ್ ಗೆ ಲಗ್ಗೆ ಇಟ್ಟಿದ್ದು,ಭಾನುವಾರ ಭಾರತದೊಂದಿಗೆ ದೊಡ್ಡ ಹಣಾಹಣಿ ನಡೆಸಲು ಸಿದ್ಧವಾಗಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯದ ಬಿಗಿ ದಾಳಿಗೆ ನಲುಗಿ ಭಾರೀ ಆಘಾತಕ್ಕೆ ಸಿಲುಕಿತಾದರೂ ಆಪದ್ಬಾಂಧವನಂತೆ ಡೇವಿಡ್ ಮಿಲ್ಲರ್ ಅವರು ಶತಕದ ನೆರವಿನಿಂದ ಇನ್ನೂರರ ಗಡಿ ದಾಟಲು ಸಾಧ್ಯವಾಯಿತು. 213 ರನ್ ಗಳ ಸಾಧಾರಣ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯ 47.2 ಓವರ್ ಗಳಲ್ಲಿ ಗುರಿ ತಲುಪಿ(215) 3 ವಿಕೆಟ್ ಗಳ ಜಯಭೇರಿ ಬಾರಿಸಿ ಫೈನಲ್ ಗೆ ಲಗ್ಗೆ ಇಟ್ಟಿತು. ಆಸೀಸ್ ಭರ್ಜರಿ ಆರಂಭ ಪಡೆಯಿತು.

ಟ್ರಾವಿಸ್ ಹೆಡ್ 62 ರನ್( 48 ಎಸೆತ) ಗಳಿಸಿ ಔಟಾದರು. ಡೇವಿಡ್ ವಾರ್ನರ್ 29(18ಎಸೆತ) ಗಳಿಸಿ ಔಟಾದರು. 6.1 ಓವರ್ ಗಳಲ್ಲೇ 60 ರನ್ ಕಲೆ ಹಾಕಿ ಗೆಲುವಿನ ಸೂಚನೆ ನೀಡಿತು. ಆಬಳಿಕ ದಕ್ಷಿಣ ಆಫ್ರಿಕಾ ಬೌಲರ್ ಗಳು ಮೇಲುಗೈ ಸಾಧಿಸಿದರೂ ಗೆಲುವು ತನ್ನದಾಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೆಡ್ ಅವರನ್ನು ಮಹಾರಾಜ್, ವಾರ್ನರ್ ಅವರನ್ನು ಮಾರ್ಕ್ರಾಮ್ ಬೌಲ್ಡ್ ಮಾಡಿ ಸಂಭ್ರಮಿಸಿದರು.

ಆ ಬಳಿಕ ಮಿಚೆಲ್ ಮಾರ್ಷ್ ಶೂನ್ಯಕ್ಕೆ ನಿರ್ಗಮಿಸಿದರು. 18 ರನ್ ಗಳಿಸಿದ್ದ ಮಾರ್ನಸ್ ಲಬುಶೆನ್ ಅವರನ್ನು ಶಮ್ಸಿ ಎಲ್ಬಿಡಬ್ಲ್ಯೂ ಬಲೆಗೆ ಕೆಡವಿದರು. ಬೆನ್ನಲ್ಲೇ ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು ಶಮ್ಸಿ ಕ್ಲೀನ್ ಬೌಲ್ಡ್ ಮಾಡಿ ಸಂಭ್ರಮದಲ್ಲಿ ತೇಲಾಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು