ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸಿಕ್ಸರ್‌, ಬೌಂಡರಿಗಳ ಆರ್ಭಟದಿಂದ ಉಭಯ ತಂಡಗಳು ರನ್‌ ಹೊಳೆಯನ್ನೇ ಹರಿಸಿದವು. ಈ ರಣರೋಚಕ ಕದನದಲ್ಲಿ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡ ಮುಂಬೈ ಇಂಡಿಯನ್ಸ್‌ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.

ಗೆಲುವಿಗೆ 244 ರನ್‌ಗಳ ಗುರಿ ಪಡೆದಿದ್ದ ಎಸ್‌ಆರ್‌ಹೆಚ್‌ 18.4 ಓವರ್‌ಗಳಲ್ಲೇ 249 ರನ್‌ ಬಾರಿಸಿ ಗೆದ್ದಿತು. ಈ ಗೆಲುವಿನೊಂದಿಗೆ 12 ಅಂಕ ಪಡೆದು ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿತು.

ಚೇಸಿಂಗ್‌ ಆರಂಭಿಸಿದ ಹೈದರಾಬಾದ್‌ ಪರ ಅಭಿಷೇಕ್‌ ಶರ್ಮಾ ಹಾಗೂ ಟ್ರಾವಿಸ್‌ ಹೆಡ್‌ ಜೋಡಿ ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಪವರ್‌ ಪ್ಲೇ ಮುಗಿಯುವ ಹೊತ್ತಿಗೆ ಈ ಜೋಡಿ ಬರೋಬ್ಬರಿ 92 ರನ್‌ ಬಾರಿಸಿತ್ತು.