ಟೀಮ್ ಇಂಡಿಯಾದ ಮಾಜಿ ಕೋಚ್ ತುಷಾರ್ ಅರೋಥೆ ಮನೆಯಲ್ಲಿ 1 ಕೋಟಿ ರೂ. ಮೊತ್ತ ಪತ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ವಡೋದರದ ಪತ್ಪರ್ಗಂಜ್ ಪ್ರದೇಶದಲ್ಲಿರುವ ತುಷಾರ್ ಅರೋಥೆ ಅವರ ಮನೆ ಮೇಲೆ ದಾಳಿ ನಡೆಸಿದ ವೇಳೆ ಪೊಲೀಸರಿಗೆ ಒಂದು ಕೋಟಿ ರೂ. ಲಭಿಸಿದೆ. ಈ ಹಣ ಹೇಗೆ ಬಂತು, ಎಲ್ಲಿಂದ ಬಂತು, ಇದರ ಮೂಲ ಯಾವುದು, ಇಂತಹ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರವನ್ನು ಕೋಚ್ ನೀಡಿಲ್ಲ ಎನ್ನಲಾಗುತ್ತಿದೆ.
ಈ ಕುರಿತು ವಡೋದರಾ ಪೊಲೀಸರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಹಣದ ಮೂಲದ ಬಗ್ಗೆ ಅರೋಥೆ ಯಾವುದೇ ಸ್ಪಷ್ಟ ಉತ್ತರ ನೀಡಿಲ್ಲ. ಮನೆಯ ಮೇಲೆ ದಾಳಿ ನಡೆಸಿ ಬೂದು ಬಣ್ಣದ ಬ್ಯಾಗ್ನಲ್ಲಿಟ್ಟಿದ್ದ ಒಟ್ಟು ಮೊತ್ತ 1.01 ಕೋಟಿ ರೂಪಾಯಿ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.