ಹ್ಯಾಂಗ್ಝೌ: ಚೀನಾದ ಹ್ಯಾಂಗ್ಝೌನ ಪಿಂಗ್ಫೆಂಗ್ ಕ್ಯಾಂಪಸ್ ಕ್ರಿಕೆಟ್ ಫೀಲ್ಡ್ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಪುರುಷರ ಟಿ20 ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ ನಾಯಕತ್ವದ ಭಾರತ ತಂಡ ಭರ್ಜರಿ ಆರಂಭ ಪಡೆದುಕೊಂಡಿದೆ.
ನೇಪಾಳ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತು ಕಣಕ್ಕಿಳಿದ ಟೀಮ್ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ ಹಾಗೂ ರುತುರಾಜ್ ಗಾಯಕ್ವಾಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಜೈಸ್ವಾಲ್ ಸಿಕ್ಸರ್ ಸಿಡಿಸಿ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದರೆ, ಗಾಯಕ್ವಾಡ್ ನಾಯಕನ ಆಟ ಆಡುತ್ತಿದ್ದಾರೆ.
ಇತ್ತ ನೇಪಾಳ ಕೂಡ ಬಲಿಷ್ಠವಾಗಿದೆ. ಗುಂಪು ಹಂತದಲ್ಲಿ ಮಂಗೋಲಿಯಾ ವಿರುದ್ಧದ ಬರೋಬ್ಬರಿ 314 ರನ್ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ ನೇಪಾಳ ತಂಡವನ್ನು ಭಾರತ ಕ್ವಾರ್ಟರ್-ಫೈನಲ್ನ ಮೊದಲ ಪಂದ್ಯದಲ್ಲಿ ಎದುರಿಸಲಿದೆ.
ಏಷ್ಯನ್ ಗೇಮ್ಸ್ 2023 ಕ್ವಾರ್ಟರ್ ಫೈನಲ್ ವೇಳಾಪಟ್ಟಿ
ಅ.3 – ಭಾರತ vs ನೇಪಾಳ
ಅ.3 – ಪಾಕ್ vs ಹಾಂಗ್ ಕಾಂಗ್
ಅ.4– ಶ್ರೀಲಂಕಾ vs ಅಫ್ಘಾನಿಸ್ತಾನ
ಅ.4– ಬಾಂಗ್ಲಾದೇಶ vs ಮಲೇಷ್ಯಾ