News Karnataka Kannada
Friday, May 17 2024
ಕ್ರೀಡೆ

400 ಮೀಟರ್ ಓಟದಲ್ಲಿ ಚಿನ್ನ ಗೆದ್ದು ಐತಿಹಾಸಿಕ ಸಾಧನೆಗೈದ ರೈತನ ಮಗಳು!

Photo Credit :

400 ಮೀಟರ್ ಓಟದಲ್ಲಿ ಚಿನ್ನ ಗೆದ್ದು ಐತಿಹಾಸಿಕ ಸಾಧನೆಗೈದ ರೈತನ ಮಗಳು!

ಟಂಪೆರೆ: ಭಾರತದ ಹಿಮಾದಾಸ್ ಅವರು  ಫಿನ್ ಲ್ಯಾಂಡ್ ನಲ್ಲಿ ನಡೆಯುತ್ತಿರುವ ಐಎಎಎಫ್ ಅಂಡರ್ 20 ಅಥ್ಲೆಟಿಕ್ ಚಾಂಪಿಯನ್ ಶಿಪ್ ನ 400 ಮೀಟರ್ ಓಟದಲ್ಲಿ ಸ್ವರ್ಣ ಗೆದ್ದುಕೊಂಡು ಐತಿಹಾಸಿಕ ಸಾಧನೆ ಮಾಡಿದ್ದಾರೆ.

18ರ ಹರೆಯದ ಹಿಮಾ 51.46 ಸೆಕೆಂಡ್ಸ್ ನಲ್ಲಿ ಗುರಿಮುಟ್ಟಿ ಈ ಸಾಧನೆ ಮಾಡಿದ ಭಾರತದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

400 ಮೀಟರ್ ಓಟದಲ್ಲಿ ರೊಮಾನಿಯಾದ ಆಂಡ್ರಿಯಾ ಮಿಕ್ಲಾಸ್ ದ್ವಿತೀಯ ಮತ್ತು ಅಮೆರಿಕಾದ ಟೇವರ್ ಮಾನ್ಸನ್ ತೃತೀಯ ಸ್ಥಾನ ಪಡೆದರು.

ಎಪ್ರಿಲ್ ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ ನ 400 ಮೀಟರ್ ಓಟದಲ್ಲಿ ಹಿಮಾ 6ನೇ ಸ್ಥಾನ ಪಡೆದಿದ್ದರು. ಹಿಮಾ ಅಸ್ಸಾಂನ ನಾಗೋನ್ ಜಿಲ್ಲೆಯ ದಿಂಗ್ ಗ್ರಾಮದ ರೈತರೊಬ್ಬರ ಮಗಳು.

ಹಿಮಾ ಸಾಧನೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು