ಸಂಜು ಸಾಮ್ಸನ್ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್ 164 ರನ್ಗಳಿಸಿದ್ದು, ಹೈದರಾಬಾದ್ಗೆ 165 ರನ್ಗಳ ಕಠಿಣ ಗುರಿ ನೀಡಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ರಾಯಲ್ಸ್ 2ನೇ ಓವರ್ನಲ್ಲೇ ಆಘಾತ ಅನುಭಿವಿಸಿತು. ಆರಂಭಿಕರಾಗಿ ಕಣಕ್ಕಿಳಿದಿದ್ದ ಎವಿನ್ ಲೂಯಿಸ್ ಕೇವಲ 6 ರನ್ಗಳಿಸಿ ಭುವನೇಶ್ವರ್ಗೆ ವಿಕೆಟ್ ಒಪ್ಪಿಸಿದರು.
ಬಳಿಕ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಉತ್ತಮವಾಗಿ ಬ್ಯಾಟ್ ಬೀಸಿದರು. 23 ಎಸೆತಗಳನ್ನು ಎದುರಿಸಿದ ಜೈಸ್ವಾಲ್ 5 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 36 ರನ್ಗಳಿಸಿದರು.ಜೈಸ್ವಾಲ್ ನಂತರ ಬಂದ ಲಿವಿಂಗ್ಸ್ಟೋನ್ ಕೇವಲ 4 ರನ್ಗಳಿಸಿ ಔಟಾದರು. ಬಳಿಕ ನಾಯಕ ಸಾಮ್ಸನ್ ಮತ್ತು ಲಾಮ್ರೋರ್ 4ನೇ ವಿಕೆಟ್ ಜೊತೆಯಾಟದಲ್ಲಿ 84 ರನ್ಗಳ ಜೊತೆಯಾಟ ನೀಡಿ ತಂಡಕ್ಕೆ ಚೇತರಿಕೆ ನೀಡಿದರು.
ಸಂಜು ಸಾಮ್ಸನ್, ಸಿದ್ಧಾರ್ಥ್ ಕೌಲ್ಗೆ ವಿಕೆಟ್ ಒಪ್ಪಿಸುವ ಮುನ್ನ 57 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 7 ಬೌಂಡರಿಗಳ ಸಹಿತ 82 ರನ್ಗಳಿಸಿದರು. ಲಾಮ್ರೋರ್ 28 ಎಸೆತಗಳಲ್ಲಿ 29 ರನ್ಗಳಿಸಿ ಅಜೇಯರಾಗುಳಿದರು. ಹೈದರಾಬಾದ್ ಪರ ಸಿದ್ಧಾರ್ಥ್ ಕೌಲ್ 36ಕ್ಕೆ2, ರಶೀದ್ ಖಾನ್ 31ಕ್ಕೆ1, ಭುವನೇಶ್ವರ್ ಕುಮಾರ್ 28ಕ್ಕೆ1 ಮತ್ತು ಸಂದೀಪ್ ಶರ್ಮಾ 30ಕ್ಕೆ 1 ವಿಕೆಟ್ ಪಡೆದರು.