ನ್ಯೂಯಾರ್ಕ್: ರಿಯೋ ಒಲಿಂಪಿಕ್ಸ್ ನ ಡಬಲ್ಸ್ ಟೆನಿಸ್ ನಲ್ಲಿ ಅಮೆರಿಕ ಪರ ಬೆಳ್ಳಿ ಗೆಲ್ಲಲು ನಾನೊಬ್ಬ ಹಿಂದೂ ಆಗಿರುವುದರಿಂದ ಸಾಧ್ಯವಾಯಿತು ಎಂದು ರಾಜೀವ್ ರಾಮ್ ಹೇಳಿದ್ದಾರೆ.
ಮೂಲತಃ ಬೆಂಗಳೂರಿನವರಾದ ರಾಜೀವ್ ರಾಮ್ ಒಲಿಂಪಿಕ್ ವಿಜಯದ ಬಗ್ಗೆ ಮಾತನಾಡುವಾಗ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬೆಳ್ಳಿ ಪದಕ ಗೆಲ್ಲುವ ಮೂಲಕ ರಾಜೀವ್ ಇದೀಗ ಅಮೆರಿಕದಲ್ಲಿರುವ ಹಿಂದು ಮಕ್ಕಳಿಗೆ ಆದರ್ಶರಾಗಿದ್ದಾರೆ. ಹಿಂದೂ ಆಗಿದ್ದರಿಂದ ನಾನು ಯೋಗವನ್ನು ಕಟ್ಟುನಿಟ್ಟಿನಿಂದ ಆಚರಿಸುತ್ತಿದ್ದೆ ಇದೇ ಕಾರಣದಿಂದಾಗಿ ಕ್ರೀಡಾಂಗಣದಲ್ಲಿ ಮಾನಸಿಕ ಸ್ಥಿಮಿತ ಉಳಿಸಿಕೊಳ್ಳಲು ಸಾಧ್ಯವಾಯಿತು ಎಂದು ರಾಜೀವ್ ರಾಮ್ ಹೇಳಿದರು.