News Karnataka Kannada
Monday, May 06 2024
ಕ್ರೀಡೆ

ಹಾಕಿ ಏಷ್ಯಾಕಪ್: ಸೂಪರ್ ಫೋರ್ ಗೆ ಅರ್ಹತೆ ಪಡೆದ ಭಾರತ

Untitled 1
Photo Credit :

ಜಕಾರ್ತ: ಏಶ್ಯಕಪ್‌ನಲ್ಲಿ ಗುರುವಾರ ಆಡಿದ ತನ್ನ ಮೂರನೇ ಹಾಗೂ ಕೊನೆಯ ಗ್ರೂಪ್ ಪಂದ್ಯದಲ್ಲಿ ಆತಿಥೇಯ ಇಂಡೋನೇಶ್ಯ ತಂಡವನ್ನು ಹಾಲಿ ಚಾಂಪಿಯನ್ ಭಾರತವು 16-0 ಗೋಲುಗಳ ಅಂತರದಿಂದ ಭರ್ಜರಿಯಾಗಿ ಮಣಿಸಿದೆ.

ಈ ಗೆಲುವಿನ ಮೂಲಕ ‘ಎ’ ಗುಂಪಿನಲ್ಲಿ ಪಾಕಿಸ್ತಾನವನ್ನು ಹಿಂದಿಕ್ಕಿ 2ನೇ ಸ್ಥಾನ ಪಡೆದ ಭಾರತ ಟೂರ್ನಿಯಲ್ಲಿ ಸೂಪರ್ ಫೋರ್‌ಗೆ ಅರ್ಹತೆ ಪಡೆದಿದೆ.

ಮೊದಲೆರಡು ಲೀಗ್ ಪಂದ್ಯದಲ್ಲಿ ಪಾಕಿಸ್ತಾನ (1-1)ಹಾಗೂ ಜಪಾನ್ ವಿರುದ್ಧ (2-5)ನೀರಸ ಪ್ರದರ್ಶನ ನೀಡಿದ ಭಾರತ ಗುರುವಾರ ತನಗೆ ಎಷ್ಟು ಸಾಧ್ಯವೋ ಅಷ್ಟು ಗೋಲು ಗಳಿಸಿತು. ದಿಪ್ಸನ್ ಟಿರ್ಕಿ ಒಟ್ಟು ಐದು ಗೋಲುಗಳನ್ನು ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು.

ಬೀರೇಂದ್ರ ಲಾಕ್ರಾ ಬಳಗಕ್ಕೆ ಟೂರ್ನಿಯಲ್ಲಿ ನಾಕೌಟ್ ಹಂತಕ್ಕೇಲು 16 ಇಲ್ಲವೇ ಅದಕ್ಕಿಂತ ಹೆಚ್ಚು ಗೋಲುಗಳ ಅಂತರದಿಂದ ಗೆಲುವು ಸಾಧಿಸುವ ಅಗತ್ಯವಿತ್ತು. ಈ ಗೆಲುವಿನಿಂದ ಕೋಚ್ ಸರ್ದಾರ್ ಸಿಂಗ್ ಮುಖದಲ್ಲಿ ಮಂದಹಾಸ ಮೂಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು