ನವದೆಹಲಿ: ಭಾರತದ ಅಗ್ರ ಶಟ್ಲರ್ ಸೈನಾ ನೆಹ್ವಾಲ್ ಅವರು ಹಾಂಗ್ ಕಾಂಗ್ ಓಪನ್ ನ ಮೊದಲ ಸುತ್ತಿನಲ್ಲಿ ಸೋಲುಂಡು ನಿರ್ಗಮಿಸಿದ್ದಾರೆ.
ಬುಧವಾರ ನಡೆದ ಪಂದ್ಯದಲ್ಲಿ ಸೈನಾ ಚಿನಾದ ಚೈ ಯಾನ್ ಯಾನ್ ವಿರುದ್ಧ ಸೋಲುಂಡರು. ಚೈ ವಿರುದ್ಧ ಸೈನಾ ಮೊದಲ ಸುತ್ತಿನಲ್ಲಿ ಸೋಲುಂಡಿರುವುದು ಇದು ಎರಡನೇ ಸಲ. ಇದಕ್ಕೆ ಮೊದಲು ಕಳೆದ ವಾರ ಚೀನಾ ಓಪನ್ ನಲ್ಲಿ ಕೂಡ ಸೈನಾ ಮೊದಲು ಸುತ್ತಿನಲ್ಲಿ ಸೋಲು ಕಂಡಿದ್ದರು.
24 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸೈನಾ 9-21, 12-21ರಿಂದ ಸೋಲು ಕಂಡರು.