ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ 325ರನ್ಗೆ ಆಲ್ಔಟ್ ಆಗಿದೆ. ಭಾರತ ತಂಡದ ಎಲ್ಲಾ ಹತ್ತು ವಿಕೆಟ್ಗಳನ್ನು ಕಿವೀಸ್ ಸ್ಪಿನ್ನರ್ ಅಜಾಜ್ ಪಟೇಲ್ ಒಬ್ಬರೇ ತೆಗೆದು ದಾಖಲೆ ಮಾಡಿದ್ದಾರೆ.
ಬರೋಬ್ಬರಿ 47.5 ಓವರ್ ಬೌಲಿಂಗ್ ಮಾಡಿದ್ದು, 119 ರನ್ ನೀಡಿ ಎಲ್ಲಾ ಹತ್ತು ವಿಕೆಟ್ಗಳನ್ನು ಕಿತ್ತಿದ್ದಾರೆ. ಜಿಮ್ ಲೇಕರ್, ಅನಿಲ್ ಕುಂಬ್ಳೆ ಬಳಿಕ ಅಜಾಜ್ ಪಟೇಲ್ ನೂತನ ಮೈಲಿಗಲ್ಲು ಸ್ಥಾಪಿಸಿದ್ದಾರೆ.