ದುಬೈ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನಲ್ಲಿ 150-160ರ ಮೊತ್ತವು ಉತ್ತಮವಾಗಿದ್ದು, ಸ್ಪಿನ್ನರ್ ಗಳು ಇಲ್ಲಿ ಪ್ರಮುಖ ಪಾತ್ರ ವಹಿಸುವರು ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ ಸಿಬಿ) ನಿರ್ದೇಶಕ ಮೈಕ್ ಹೆಸ್ಸನ್ ಅಭಿಪ್ರಾಯಪಟ್ಟಿರುವರು.
ಕೆಲವು ಮೈದಾನಗಳಲ್ಲಿ ಸ್ಪಿನ್ನರ್ ಗಳು ಪ್ರಮುಖ ಪಾತ್ರ ವಹಿಸುವರು. ಅದರಲ್ಲೂ ಅಬುಧಾಬಿಯಲ್ಲಿ ಇದುವರೆಗೂ ಸ್ಪಿನ್ನರ್ ಗಳು ಮಹತ್ವದ ಪಾತ್ರ ವಹಿಸಿದ್ದರು. ದುಬೈ ಹಾಗೂ ಶಾರ್ಜಾದಲ್ಲಿ ಸ್ಪಿನ್ ಗೆ ಅಷ್ಟೊಂದು ನೆರವು ಸಿಗದು ಎಂದು ಹೆಸ್ಸನ್ ಟ್ವೀಟ್ ಮಾಡಿರುವರು.
ಪ್ರತಿಯೊಂದು ಪಿಚ್ ಬಗ್ಗೆ ನಮ್ಮಲ್ಲಿ ಅತಿಯಾದ ಮಾಹಿತಿ ಇದೆ. ಆದರೆ ನಾವು ಆ ದಿನದಲ್ಲಿ ಅದಕ್ಕೆ ಹೊಂದಿಕೊಂಡು ಆಡಬೇಕಾಗಿದೆ. ಯುಎಇಯಲ್ಲಿ 150-160ರ ಮೊತ್ತವು ಅತ್ಯುತ್ತಮವಾಗಿರುವುದು ಎಂದರು.