News Karnataka Kannada
Friday, May 17 2024
ಕ್ರೀಡೆ

ವಿಶ್ವ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ: ವೆಸ್ಟ್ ಇಂಡೀಸ್ ಗೆ ಚಾಂಪಿಯನ್ ಪಟ್ಟ

Photo Credit :

ವಿಶ್ವ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ: ವೆಸ್ಟ್ ಇಂಡೀಸ್ ಗೆ ಚಾಂಪಿಯನ್ ಪಟ್ಟ

ಕೋಲ್ಕತಾ: ವಿಶ್ವ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಎಲ್ಲರ ಲೆಕ್ಕಾಚಾರವನ್ನು ಬುಡಮೇಲು ಮಾಡಿದ್ದು ಕಾರ್ಲೊಸ್‌ ಬ್ರಾಥ್‌ವೈಟ್‌. ಕೊನೆಯ ಓವರ್‌ನಲ್ಲಿ ಇವರು ಸಿಡಿಸಿದ ನಾಲ್ಕು ಸಿಕ್ಸರ್‌ಗಳ ಬಲದಿಂದ ವೆಸ್ಟ್ ಇಂಡೀಸ್ ತಂಡ ಟೂರ್ನಿಯಲ್ಲಿ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಪಡೆದುಕೊಂಡಿತು.

ಇಲ್ಲಿನ ಈಡನ್ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತ ಇಂಗ್ಲೆಂಡ್ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ ಒಂಬತ್ತು ವಿಕೆಟ್‌ ಕಳೆದುಕೊಂಡು 155 ರನ್ ಕಲೆ ಹಾಕಿತು.ಈ ಗುರಿಯ ಎದುರು ಎಲ್ಲರೂ ಮೆಚ್ಚುವಂಥ ಹೋರಾಟ ಮಾಡಿದ ವಿಂಡೀಸ್ ತಂಡ ಎರಡು ಎಸೆತಗಳು ಬಾಕಿ ಇರುವಂತೆಯೇ ಗುರಿ ತಲುಪಿತು. ಇದರ ಜೊತೆಗೆ ಕ್ರಿಕೆಟ್‌ ಲೋಕದ ವಿಶಿಷ್ಟ ದಾಖಲೆಗೂ ಭಾನುವಾರ ಸಾಕ್ಷಿಯಾ ಯಿತು. ಒಂದೇ ವಿಶ್ವ ಟೂರ್ನಿಯಲ್ಲಿ ಪುರುಷ ಮತ್ತು ಮಹಿಳಾ ತಂಡಗಳು ಒಟ್ಟಿಗೆ ಚಾಂಪಿಯನ್‌ ಆಗಿದ್ದು ಇದೇ ಮೊದಲು.
 
ಆರಂಭದಲ್ಲಿಯೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಕಾರಣ ಆಂಗ್ಲರ ತಂಡ ಮೊದಲ ಐದು ಓವರ್‌ಗಳು ಮುಗಿದಾಗ 23 ರನ್‌ಗಳನ್ನಷ್ಟೇ ಕಲೆ ಹಾಕಿತ್ತು. ಹತ್ತು ಓವರ್‌ಗಳು ಪೂರ್ಣಗೊಂಡಾಗ ತಂಡದ ಖಾತೆಯಲ್ಲಿ ಇದ್ದಿದ್ದು 67 ರನ್‌. ಕೊನೆಯ ಹತ್ತು ಓವರ್‌ಗಳಲ್ಲಿ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಅಬ್ಬರಿಸಿದರು. ಹನ್ನೊಂದನೇ ಓವರ್‌ನ ಮೊದಲ ಎರಡು ಎಸೆತಗಳಲ್ಲಿ  ಬಟ್ಲರ್‌ ಸತತ ಎರಡು ಸಿಕ್ಸರ್‌ ಬಾರಿಸಿದರು. ಇಂಗ್ಲೆಂಡ್‌ಗೆ ಕೊನೆಯ 30 ಎಸೆತಗಳಲ್ಲಿ ವೇಗವಾಗಿ ರನ್ ಕಲೆ ಹಾಕಲು ಸಾಧ್ಯವಾಯಿತು. ಇಂಗ್ಲೆಂಡ್ ತಂಡ 2007, 2009, 2012 ಮತ್ತು 2014ರ ರ ವಿಶ್ವ  ಟೂರ್ನಿಗಳಲ್ಲಿ ಎರಡನೇ ಸುತ್ತಿನಲ್ಲಿಯೇ ಮುಗ್ಗರಿಸಿತ್ತು. ವೆಸ್ಟ್‌ ಇಂಡೀಸ್‌ 2009 ಮತ್ತು ಬಾಂಗ್ಲಾದಲ್ಲಿ ನಡೆದ ಹಿಂದಿನ ಟೂರ್ನಿಯಲ್ಲಿ ಸೆಮಿಫೈನಲ್‌ವರೆಗೆ ತಲುಪಿತ್ತು.

ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಆಲ್ ರೌಂಡರ್ ಆಟಗಾರ ಡ್ವೇಯ್ನ್ ಬ್ರಾವೋ ಅವರ ನೂತನ ವಿಡಿಯೋ ಆಲ್ಬಮ್ ಚಾಂಪಿಯನ್. ಖ್ಯಾತ ನಿರ್ಮಾಣ ಸಂಸ್ಥೆ ವೇಗಾ ಹೌಸ್ ಈ ವಿಡಿಯೋ  ಆಲ್ಬಮ್ ಅನ್ನು ನಿರ್ಮಿಸಿದ್ದು, ಜೋಸೆಫ್ ಫರ್ನಾಂಡೋ ಅವರು ಇದನ್ನು ನಿರ್ದೇಶಿಸಿದ್ದಾರೆ. ಈ ವಿಡಿಯೋ ಆಲ್ಬಮ್ ನಲ್ಲಿ ವೆಸ್ಟ್ ಇಂಡೀಸ್ ತಂಡದ ಆಲ್ ರೌಂಡರ್ ಆಟಗಾರ ಕ್ರೀಡಾಕ್ಷೇತ್ರದಲ್ಲಿ  ವಿಂಡೀಸ್ ಖ್ಯಾತಿಗಳಿಸಿರುವ ಆಟಗಾರರನ್ನು ಶ್ಲಾಘಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು