ನ್ಯೂಯಾರ್ಕ್: ಚೆಸ್ ಜಗತ್ತಿನ ಅತಿ ಕಿರಿಯ ಚಾಂಪಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮ್ಯಾಗ್ನಸ್ ಕಾರ್ಲ್ ಸನ್ ವಿಶ್ವ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಸತತ ಮೂರನೇ ಬಾರಿ ಪ್ರಶಸ್ತಿ ಎತ್ತಿ ಹಿಡಿದಿದ್ದು, ವಿಶ್ವ ಚೆಸ್ ನಲ್ಲಿ ನಾರ್ವೆ ಆಟಗಾರನ ಗೆಲುವಿನ ಓಟ ಮುಂದುವರಿದಿದೆ.
ರಷ್ಯಾದ ಸರ್ಜೆಯ್ ಕರ್ಜಾಕಿನ್ ವಿರುದ್ಧ ವಿಶ್ವ ಚೆಸ್ ಚಾಂಪಿಯನ್ ಶಿಪ್ ನ 4 ಪಂದ್ಯಗಳ ರ್ಯಾಪಿಡ್ ಪ್ಲೇಆಫ್ ನಲ್ಲಿ ಕಾರ್ಲ್ ಸನ್ ಜಯಗಳಿಸಿದರು. ಪ್ಲೇ ಆಫ್ನ1 ಮತ್ತು 3 ನೇ ಸುತ್ತು ಡ್ರಾ ದಲ್ಲಿ ಅಂತ್ಯವಾಗಿದ್ದು, 2 ಮತ್ತು 4 ನೇ ಸುತ್ತಿನಲ್ಲಿ ಉತ್ತಮ ಆಟವಾಡಿದ ಕಾರ್ಲ್ ಸನ್ ನಂತರ ಟೈಬ್ರೇಕರ್ ನಲ್ಲಿ ಪ್ರತಿಸ್ಪರ್ಧಿ ಆಟಗಾರನಾದ ರಷ್ಯಾದ ಕರ್ಜಾಕಿನ್ ಅವರನ್ನು ಸೋಲಿಸಿ ಗೆಲುವಿನ ನಗೆ ಬೀರುವ ಮೂಲಕ ಮೂರನೇ ಬಾರಿ ವಿಶ್ವ ಚಾಂಪಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.