ಟೋಕಿಯೊ: ಒಲಿಂಪಿಕ್ಸ್ನ ಮಹಿಳಾ ಹಾಕಿಯ ಕಂಚಿನ ಪದಕಕ್ಕಾಗಿ ನಡೆದ ಪೈಪೋಟಿಯಲ್ಲಿ ಭಾರತ ತಂಡ ಗ್ರೇಟ್ ಬ್ರಿಟನ್ ಎದುರು ಪರಾಭವಗೊಂಡಿದೆ. ಆದರೆ, ಭಾರತೀಯ ಮಹಿಳಾ ಹಾಕಿ ತಂಡದ ಕ್ರೀಡಾಸ್ಫೂರ್ತಿಯನ್ನು ಗ್ರೇಟ್ ಬ್ರಿಟನ್ ತಂಡ ಹಾಡಿ ಹೊಗಳಿದೆ.
ಪಂದ್ಯದ ನಂತರ ಟ್ವೀಟ್ ಮಾಡಿರುವ ಗ್ರೇಟ್ ಬ್ರಿಟನ್ ಮಹಿಳಾ ಹಾಕಿ ತಂಡ, ‘ಒಲಿಂಪಿಕ್ಸ್ನಲ್ಲಿ ಹಾಕಿ ಇಂಡಿಯಾ ವಿಶೇಷವಾದ ಸಾಧನೆ ಮಾಡಿದೆ. ಭಾರತ ತಂಡಕ್ಕೆ ಭವಿಷ್ಯದಲ್ಲಿ ಉಜ್ವಲ ಭವಿಷ್ಯವಿದೆ’ ಎಂದು ಹೇಳಿದೆ.
ಭಾರತದ ವನಿತೆಯರ ತಂಡ ರೋಚಕ ಹಣಾಹಣಿಯಲ್ಲಿ ಸೋತರೂ ಪ್ರಧಾನಿ ಸೇರಿದಂತೆ ದೇಶದ ಗಣ್ಯರು ತಂಡದ ಅಮೋಘ ಪ್ರದರ್ಶನವನ್ನು ಕೊಂಡಾಡಿದ್ದಾರೆ.