ಟೋಕಿಯೊ: ಮನ್ಪ್ರೀತ್ ಸಿಂಗ್ ನೇತೃತ್ವದ ಭಾರತ ಹಾಕಿ ತಂಡವು ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಶುಭಾರಂಭ ಮಾಡಿದೆ.
ಹರ್ಮನ್ಪ್ರೀತ್ ಸಿಂಗ್ ಬಾರಿಸಿದ ಎರಡು ಗೋಲು ಹಾಗೂ ಗೋಲ್ ಕೀಪರ್ ಪಿ.ಆರ್. ಶ್ರೀಜೇಶ್ ಮನೋಜ್ಞ ಪ್ರದರ್ಶನದ ನೆರವಿನಿಂದ ಭಾರತ ಹಾಕಿ ತಂಡವು ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು 3-2 ಗೋಲುಗಳ ಅಂತರದಲ್ಲಿ ಜಯ ಸಾಧಿಸಿದೆ.
ನ್ಯೂಜಿಲೆಂಡ್ ಹಾಕಿ ತಂಡವು ಮೊದಲ ಕ್ವಾರ್ಟರ್ನ ಆರಂಭದಲ್ಲೇ 1-0 ಮುನ್ನಡೆ ಸಾಧಿಸಿತು. ಇದಾಗಿ ಕೆಲ ಹೊತ್ತಿನಲ್ಲೇ, ಅಂದರೆ ಪಂದ್ಯದ 10ನೇ ನಿಮಿಷದಲ್ಲಿ ರೂಪಿಂದರ್ ಪಾಲ್ ಗೋಲು ಬಾರಿಸುವ ಭಾರತದ ಗೋಲುಗಳ ಖಾತೆ ತೆರೆದರು. ಭಾನುವಾರ ಆಸ್ಟ್ರೇಲಿಯಾ ಜೊತೆ ಭಾರತ ತಂಡ ಸೆಣೆಸಾಡಲಿದೆ.