News Karnataka Kannada
Monday, May 06 2024
ಕ್ರೀಡೆ

ರೋಯಿಂಗ್ ಸ್ಪರ್ಧೆ; ಒಲಂಪಿಕ್ ನಲ್ಲಿ ಭಾರತದ ಅರ್ಜುನ್ ಮತ್ತು ಅರವಿಂದ್

Photo Credit :

ರೋಯಿಂಗ್ ಸ್ಪರ್ಧೆ; ಒಲಂಪಿಕ್ ನಲ್ಲಿ ಭಾರತದ ಅರ್ಜುನ್ ಮತ್ತು ಅರವಿಂದ್

ನವದೆಹಲಿ : ಭಾರತದ ರೋಯಿಂಗ್ ಸ್ಪರ್ಧಿಗಳಾದ ಅರ್ಜುನ್ ಲಾಲ್ ಜಾಟ್‌ ಹಾಗೂ ಅರವಿಂದ್‌ ಸಿಂಗ್ ಒಲಿಂಪಿಕ್ಸ್ ಟಿಕೆಟ್ ಗಿಟ್ಟಿಸಿದ್ದಾರೆ. ಟೋಕಿಯೊದಲ್ಲಿ ನಡೆದ ಏಷ್ಯಾ ಒಷಾನಿಯಾ ಅರ್ಹತಾ ಟೂರ್ನಿಯ ಪುರುಷರ ಲೈಟ್‌ವೇಟ್ ಡಬಲ್‌ ಸ್ಕಲ್ ವಿಭಾಗದಲ್ಲಿ ಈ ಜೋಡಿಯು ಎರಡನೇ ಸ್ಥಾನ ಗಳಿಸುವ ಮೂಲಕ ಕೂಟಕ್ಕೆ ಅರ್ಹತೆ ಪಡೆಯಿತು.

ಪುರುಷರ ವೈಯಕ್ತಿಕ ಸಿಂಗಲ್ಸ್ ಫೈನಲ್‌ನಲ್ಲಿ ನಾಲ್ಕನೇ ಸ್ಥಾನ ಗಳಿಸಿದ ಭಾರತದ ಜಕರ್ ಖಾನ್‌ ಒಲಿಂಪಿಕ್ಸ್ ಅವಕಾಶ ತಪ್ಪಿಸಿಕೊಂಡರು. ಏಕೆಂದರೆ ಸ್ಕಲ್ ವಿಭಾಗದಲ್ಲಿ ಒಂದು ದೇಶಕ್ಕೆ ಒಂದು ಅರ್ಹತಾ ಸ್ಥಾನ ಮಾತ್ರ ಮೀಸಲಾಗಿಡಲಾಗಿದೆ.

ಪುರುಷರ ಲೈಟ್‌ವೇಟ್‌ ಡಬಲ್‌ ಸ್ಕಲ್‌ನಲ್ಲಿ ಅಗ್ರ ಮೂರು ಸ್ಥಾನ ಗಳಿಸಿದವರು ಟೋಕಿಯೊ ಟಿಕೆಟ್‌ ಗಳಿಸಿದರು.

‘ಈ ಸ್ಪರ್ಧೆಯಲ್ಲಿ ಪ್ರತಿ ದೇಶಕ್ಕೆ ಒಂದು ಅರ್ಹತಾ ಸ್ಥಾನ ಮಾತ್ರ ಗಳಿಸುವ ಅವಕಾಶವಿತ್ತು. ಅರವಿಂದ್ ಹಾಗೂ ಅರ್ಜುನ್‌ ಇಲ್ಲಿ ಎರಡನೇ ಸ್ಥಾನ ಪಡೆದು ಅರ್ಹತೆ ಪಡೆದರು. ವೈಯಕ್ತಿಕ ವಿಭಾಗದಲ್ಲಿ ಜಕರ್ ಖಾನ್ ನಾಲ್ಕನೇ ಸ್ಥಾನ ಗಳಿಸಿದರು. ಆದರೆ ದುರದೃಷ್ಟವಶಾತ್‌ ಅವರಿಗೆ ಅವಕಾಶ ಕೈ ತಪ್ಪಿತು’ ಎಂದು ಭಾರತ ರೋಯಿಂಗ್ ಫಡೆರೇಷನ್‌ ಅಧ್ಯಕ್ಷೆ ರಾಜಲಕ್ಷ್ಮೀ ಸಿಂಗ್ ದೇವ್ ತಿಳಿಸಿದರು.

ಜುಲೈ 23ರಂದು ಆರಂಭವಾಗುವ ಒಲಿಂಪಿಕ್ಸ್‌ಗೆ ರೋಯಿಂಗ್‌ನಲ್ಲಿ ಭಾರತದಿಂದ ಅರ್ಜುನ್ ಲಾಲ್‌ ಮತ್ತು ಅರವಿಂದ್ ಮಾತ್ರ ಸ್ಪರ್ಧಿಸಲಿದ್ದಾರೆ. ಕೋವಿಡ್‌ ಹಿನ್ನೆಲೆಯಲ್ಲಿ ಇತರ ಅರ್ಹತಾ ಟೂರ್ನಿಗಳಲ್ಲಿ ಭಾರತದವರು ಪಾಲ್ಗೊಳ್ಳುತ್ತಿಲ್ಲ.

‘ಇಟಲಿಯಲ್ಲಿ ಮತ್ತೊಂದು ಒಲಿಂಪಿಕ್ಸ್ ಅರ್ಹತಾ ಟೂರ್ನಿ ನಡೆಯಲಿದೆ. ಆದರೆ ಕೋವಿಡ್ ಹಿನ್ನೆಲೆಯಲ್ಲಿ ನಾವು ಸ್ಪರ್ಧಿಗಳನ್ನು ಕಳುಹಿಸುತ್ತಿಲ್ಲ. ಹೀಗಾಗಿ ಟೋಕಿಯೊದಲ್ಲಿ ನಡೆಯುತ್ತಿರುವುದೇ ನಮಗೆ ಕೊನೆಯ ಅರ್ಹತಾ ಸ್ಪರ್ಧೆಯಾಗಿದೆ’ ಎಂದು ರಾಜಲಕ್ಷ್ಮೀ ತಿಳಿಸಿದರು.

ಟೋಕಿಯೊದ ‘ಸೀ ಫಾರೆಸ್ಟ್ ವಾಟರ್‌ವೇ’ಯಲ್ಲಿ ನಡೆದ ಈ ಟೂರ್ನಿಯಲ್ಲಿ ಭಾರತದ 14 ಮಂದಿ ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು