News Karnataka Kannada
Monday, April 29 2024
ಕ್ರೀಡೆ

ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರಶಸ್ತಿ ಪುರಸ್ಕೃತ ಕ್ರೀಡಾ ಪಟು ಮೂಸ ಶರೀಫ್‌ ಗೆ ಅಭಿನಂದನೆ

Moosa Navigator 7 7 21
Photo Credit :

ಮಂಗಳೂರು: ತ್ರಿಭುವನ್ ಆಟೋಮೋಟಿವ್ ಸ್ಪೋಟ್ಸ್ ಕ್ಲಬ್ (ಟಿಎಎಸ್‍ಸಿ) ಹಾಗೂ ಬೆದ್ರಾ ಎಡ್ವೆಂಚರಸ್ ಕ್ಲಬ್ (ಬಿಎಸಿ) ಜಂಟಿಯಾಗಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ 2021ಕ್ಕೆ ಫೆಡರೇಶನ್ ಆಫ್ ಮೋಟರ್ ಸ್ಪೋಟ್ಸ್ ಕಾರ್ಪೋರೇಷನ್, ಇಂಡಿಯಾ (ಎಫ್‍ಎಮ್‍ಎಸ್‍ಸಿಐ) ನಾಮನಿರ್ದೇಶನ ಮಾಡಿದ ಶ್ರೀ ಮೂಸಾ ಷರೀಫ್ ಅವರನ್ನು ವಿಶೇಷವಾಗಿ ಅಭಿನಂದಿಸುತ್ತಿವೆ.
ಟ್ರ್ಯಾಕ್‍ನಲ್ಲಿ 30ಕ್ಕೂ ಅಧಿಕ ವರ್ಷಗಳನ್ನು ಸವೆಸಿದ ಶ್ರೀ ಮೂಸಾರವರು ಭಾರತದ ಯಾವುದೇ ಚಾಲಕನ ವಿಶ್ವಸನೀಯ ಮಾರ್ಗದರ್ಶಕರು. ಇಂದಿನ ತನಕ ಶ್ರೀಯುತರು ಜಗತ್ತಿನ ವಿವಿಧ ಭಾಗಗಳ ಸುಮಾರು ಐವತ್ತಕ್ಕೂ ಅಧಿಕ ಚಾಲಕರಿಗೆ ಮಾರ್ಗದರ್ಶಕರಾಗಿ ಕರ್ತವ್ಯ ನಿಭಾಯಿಸಿದ್ದಾರೆ. ಆ ಹಾದಿಯಲ್ಲಿ ನೂರಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಏಳು ಬಾರಿ ರಾಷ್ಟ್ರೀಯ ಚಾಂಪಿಯನ್‍ಶಿಪ್ ಗಳಿಸಿದ ಅವರು ಭಾರತವನ್ನು ಪ್ರತಿನಿಧಿಸಿ 200ಕ್ಕೂ ಅಧಿಕ ಬಾರಿ ವೇದಿಕೆಯೇರಿದ್ದಾರೆ. ಐಆರ್‍ಸಿ ಚಾಂಪಿಯನ್‍ಶಿಪ್ 2012, ಐಎನ್‍ಎಸ್‍ಯುವಿ ಚಾಂಪಿಯನ್‍ಶಿಪ್ 2013, ಏಷಿಯಾ ಝೋನ್ 4×4 ಚಾಂಪಿಯನ್‍ಶಿಪ್, ಎಪಿಆರ್‍ಸಿ2 ಏಷಿಯಾ ಕಪ್ ಹಾಗೂ ಯುಎಇ ಎಫ್‍ಡಬ್ಲ್ಯುಡಿ ಕ್ಲಾಸ್ ಚಾಂಪಿಯನ್‍ಶಿಪ್(3 ಬಾರಿ) ಮುಂತಾದ 100ಕ್ಕೂ ಅಧಿಕ ಪ್ರಶಸ್ತಿಗಳನ್ನು ಮುಡಿಗೇರಿಸಿದ್ದಾರೆ.
“ಮೀನುಗಾರರ ಸಾಮಾನ್ಯ ಮನೆತನದಲ್ಲಿ ಹುಟ್ಟಿದ ಮೂಸಾ ಷರೀಫ್ ಅವರು ಬೆಳೆದು ಹೆಮ್ಮರವಾದುದು ಮೂಡಬಿದಿರೆಯ ಕ್ರೀಡಾಪ್ರೇಮಿ ಜನತೆಗೆ ಬಹುಹೆಮ್ಮೆಯ ವಿಚಾರ. ಮೂಡಬಿದಿರೆಯವರಿಗೆ ಇμÉ್ಟೂಂದು ಹೆಮ್ಮೆ ಏಕೆಂದರೆ ಅಂತಾರಾಷ್ಟ್ರೀಯ ಖ್ಯಾತಿಗಳಿಸಿದ ಮೂಸಾ ಅವರ ಮೂವತ್ತು ವರ್ಷಗಳ ಮೋಟಾರು ಕ್ರೀಡಾ ಬದುಕಿನಲ್ಲಿ ಅತಿಹೆಚ್ಚು ಸಮಯವನ್ನು ನಮ್ಮ ಮೂಡಬಿದಿರೆಗಾಗಿ ವ್ಯಯ ಮಾಡಿದ್ದಾರೆ. ಅವರಿಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳು ಬಂದ ಪ್ರತಿ ಸಂದರ್ಭದಲ್ಲಿಯೂ ಮೂಡುಬಿದಿರೆ ಸಂಭ್ರಮಿಸಿದೆ, ಹೆಮ್ಮೆಪಟ್ಟಿದೆ. ಖೇಲ್ರತ್ನ ಪ್ರಶಸ್ತಿಗೆ ಮೂಸಾ ಷರೀಫ್ ಅತ್ಯಂತ ಸೂಕ್ತ ಆಯ್ಕೆ ಎಂಬುದರಲ್ಲಂತೂ ಎರಡುಮಾತಿಲ್ಲ” ಎಂಬುದಾಗಿ ಕರ್ನಾಟಕ ಸರಕಾರದ ಮಾಜಿ ಕ್ರೀಡಾ ಸಚಿವರೂ ಆಗಿದ್ದ ಶ್ರೀಯುತ ಅಭಯಚಂದ್ರ ಜೈನ್ ಅಭಿಪ್ರಾಯಪಟ್ಟರು.
ಟಿಎಎಸ್‍ಸಿ ಹಾಗೂ ಬಿಎಸಿ ಸಂಸ್ಥೆಗಳು ಅತ್ಯುಚ್ಛ ರ್ಯಾಲಿಗಾರರಾದ ಶ್ರೀಯುತ ಮೂಸಾರವರೊಂದಿಗೆ ದಶಕಗಳ ಅವಿನಾ ಸಂಬಂಧ ಹೊಂದಿದೆ. ನಮ್ಮೊಂದಿಗೆ ಮಾತನಾಡುತ್ತಾ ಟಿಎಎಸ್‍ಸಿಯ ಓರ್ವ ಸದಸ್ಯರಾದ ಶ್ರೀ ಕುಲದೀಪ್‍ರು, ‘ಶ್ರೀ ಮೂಸಾರವರು 1993ರಿಂದ ನಿರಂತರವಾಗಿ ನಮ್ಮ ಎಲ್ಲಾ ಮೋಟಾರ್ ಕ್ರೀಡಾ ವಿಭಾಗಗಳಲ್ಲೂ ಸಕ್ರಿಯರಾಗಿದ್ದರು’ ಎಂಬುದನ್ನು ನೆನಪಿಸಿಕೊಂಡರು. ಅವರಿಗೆ ಮೂಡುಬಿದಿರೆÉ ಎಂದರೆ ಬಲು ಪ್ರೀತಿ. 1996ರಲ್ಲಿ ಅವರು 1000 ರಾಷ್ಟ್ರೀಯ ಮಟ್ಟದ ಚಾಂಪಿಯನ್‍ಶಿಪ್ ಭಾಗವಹಿಸುವಿಕೆಯನ್ನು ಪೂರ್ಣಗೊಳಿಸಿದ್ದರು. ಟಿಎಎಸ್‍ಸಿ ಆಯೋಜಿಸಿದ 2ಚಕ್ರದ ಚಾಂಪಿಯನ್‍ಶಿಪ್‍ನಲ್ಲಿ ಅವರು ಮೊದಲ ಭಾಗವಹಿಸುವಿಕೆಯಲ್ಲಿಯೇ ಪ್ರಶಸ್ತಿ ಪುರಸ್ಕøತರಾದರು. ಟಿಎಎಸ್‍ಸಿಯ ಇನ್ನೋರ್ವ ಸದಸ್ಯರಾದ ಶ್ರೀ ಪ್ರತಾಪ್ ಹೇಳುವಂತೆ ಮೂಡುಬಿದಿರೆಯಲ್ಲಿ ಆಯೋಜಿಸುತ್ತಿದ್ದ ಪರ್ವತಾರೋಹಣ ಹಾಗೂ ಆಟೋ ಕ್ರಾಸ್‍ಗಳು ಅವರಿಗೆ ಬಹು ಪ್ರಿಯವಾದ ಕ್ಷೇತ್ರಗಳಾಗಿದ್ದುವು. ಅವುಗಳಲ್ಲಿ ಭಾಗವಹಿಸಿತ್ತಿದ್ದುದು ಹಾಗೂ ಅಂತಹ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವುದಕ್ಕೆ ಸಹಕಾರ ನೀಡುತ್ತಿದ್ದರು.
ಬಿಎಸಿಯ ಅಕ್ಷಯ ಜೈನ್ ಅವರು ‘ಮಂಗಳೂರು ವಲಯದ ಬಹುತೇಕರು ಮೋಟಾರು ಕ್ರೀಡಾ ಪ್ರೇಮಿಗಳಾಗಿ ಪರಿವರ್ತನೆಯಾಗುವುದರಲ್ಲಿ ಮೂಸಾ ಅವರಿಗೂ ವಿಶೇಷ ಪಾತ್ರವಿತ್ತು. ಮೂಸಾ ಅವರೊಂದಿಗೆ ನೇರ ಸಂಪರ್ಕವನ್ನು ಸಾಧಿಸುತ್ತಿದ್ದುದು ಅದಕ್ಕೊಂದು ಕಾರಣವೂ ಆಗಿತ್ತು’ ಎಂದು ತಮ್ಮ ಅನುಭವವನ್ನು ಹಂಚಿಕೊಳ್ಳುವಾಗ ಹೇಳಿದರು.ಮೋಟಾರು ಕ್ರೀಡಾಪ್ರೇಮಿಗಳಿಗೆ ಸಲೀಸಾಗಿ ಸಿಗುತ್ತಿದ್ದ ವ್ಯಕ್ತಿತ್ವ ಮೂಸಾ ಅವರದು. ಭಾರತದಾದ್ಯಂತ ಮೋಟಾರು ಕ್ರೀಡಾ ಸ್ಫೂರ್ತಿಯನ್ನು ಹೆಚ್ಚಿಸಿದವರು ಅವರು. ಅತ್ಯಂತ ಸಹಜ ಹಾಗೂ ನೈಜ ಕ್ರೀಡಾಪಟುವಾಗಿ ಮಿಲಿಯಾನುಗಟ್ಟಲೆ ಕ್ರೀಡಾ ಪ್ರೇಮಿಗಳ ಆಶಾಕಿರಣವಾಗಿದ್ದ ಶ್ರೀ ಮೂಸಾ ಅವರು ಖೇಲ್ ರತ್ನ ಪ್ರಶಸ್ತಿಗೆ ಅತ್ಯಂತ ಅರ್ಹ ವ್ಯಕ್ತಿ ಎಂಬುದರಲ್ಲಿ ಎರಡು ಮಾತಿಲ್ಲ. ಆ ಮೂಲಕ ಭಾರತದ ಮೋಟಾರ್ ರ್ಯಾಲಿಯ ಕುತೂಹಲಿಗರಿಗೂ ವಿಶೇಷವಾದ ಗೌರವ ಸಂದಂತಾಗುತ್ತದೆ ಎಂಬುದು ಮೋಟಾರ್ ಕ್ರೀಡಾಸಕ್ತ ವಲಯದ ನಂಬಿಕೆ.
ಮೂಸಾ ಅವರ ಕ್ರೀಡಾಬದುಕಿನ ಜೈತ್ರಯಾತ್ರೆಯಲ್ಲಿ ಕೋಸ್ಟಲ್ ಕರಾವಳಿಗೂ ದಕ್ಷಿಣಕನ್ನಡ ಜಿಲ್ಲೆಗೂ ಅವಿನಾಭಾವ ಸಂಬಂಧವಿರುವುದರಿಂದ ಅವರ ಯಶಸ್ಸನ್ನು ಕರಾವಳಿಕರ್ನಾಟಕದ ಯಶಸ್ಸೆಂದು ತಿಳಿದು ಹೆಮ್ಮೆ ಪಡುವುದಕ್ಕೆ ಇದು ಸೂಕ್ತ ಸಂದರ್ಭವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು